ಕರಾವಳಿಕ್ರೈಂ

ಮಂಗಳೂರು: ಈಜುಕೊಳದಲ್ಲಿ ಬ್ಯಾಂಕ್‌ ಅಧಿಕಾರಿಯ ಮೃತದೇಹ ಪತ್ತೆ..!, ಹೋಟೆಲ್‌ಗೆ ತೆರಳಿದ ಅಧಿಕಾರಿ ಶವವಾಗಿದ್ದೇಗೆ..?

ನ್ಯೂಸ್‌ ನಾಟೌಟ್‌: ಮಂಗಳೂರಿನ ಪ್ರತಿಷ್ಠಿತ ಮೋತಿಮಹಲ್‌ ಹೋಟೆಲ್‌ನ ಈಜುಕೊಳದಲ್ಲಿ ಬ್ಯಾಂಕ್‌ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿದೆ.ಮೃತ ವ್ಯಕ್ತಿಯನ್ನು ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್. ನಾಯರ್ ಎಂದು ಗುರುತಿಸಲಾಗಿದೆ.

ಯೂನಿಯನ್‌ ಬ್ಯಾಂಕ್‌ ಅಧಿಕಾರಿಯಾಗಿದ್ದ ಗೋಪು ಆರ್. ನಾಯರ್ ಭಾನುವಾರ ಮಂಗಳೂರಿಗೆ ಬಂದಿದ್ದು, ಇಲ್ಲಿನ ಮೋತಿಮಹಲ್‌ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಇಂದು ಮುಂಜಾನೆ 4 ಗಂಟೆಗೆ ಹೊಟೇಲ್ ರೂಮ್‌ನಿಂದ ಹೊರಹೋಗಿದ್ದರು. ಬಳಿಕ ಅವರ ಶವ ಹೋಟೆಲ್‌ನ ಈಜುಕೊಳದಲ್ಲಿ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ಅಧಿಕಾರಿಯ ಸಾವಿಗೆ ಸ್ಪಷ್ಟ ಕಾರಣ ತಿಳಿದುಬರಲಿದೆ.

Related posts

ಕೆ.ವಿ.ಜಿ. ವೈದ್ಯಕೀಯ ಕಾಲೇಜ್ :ಉದ್ಘಾಟನೆ ಹಾಗೂ ವೈಟ್ ಕೋಟ್ ಸಮಾರಂಭ,ಎಂ. ಬಿ.ಬಿ. ಎಸ್ ನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ವಿತರಣೆ

ಪುತ್ತೂರು, ಸುಳ್ಯದಲ್ಲಿ ಬಿಜೆಪಿಯಿಂದ ಯುವಕರಿಗೆ ಟಿಕೇಟ್‌..! ಹೊಸಮುಖಗಳತ್ತ ಹೈಕಮಾಂಡ್‌ ಒಲವು..?

ನಕಲಿ ವೈದ್ಯ ಅಬ್ದುಲ್ ನ ಫಾರ್ಮ್ ಹೌಸ್‌ ನಲ್ಲಿ ಹೂತಿಟ್ಟ ಭ್ರೂಣಗಳು ಪತ್ತೆ..! ಮಕ್ಕಳ ಮಾರಾಟ ಜಾಲದ ಕರಾಳತೆ ಕಂಡು ಬೆಚ್ಚಿಬಿದ್ದ ಪೊಲೀಸರು..!