ನ್ಯೂಸ್ ನಾಟೌಟ್ : ಬ್ಯಾಂಕ್ ಆಫ್ ಇಂಡಿಯಾ ಹಲವು ಉದ್ಯೋಗಗಳನ್ನು ಭರ್ತಿ ಮಾಡುವುದಕ್ಕಾಗಿ ಅರ್ಹ ಹಾಗೂ ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ.
ದೇಶದ್ಯಾಂತ ಇರುವ ಬ್ಯಾಂಕ್ ಆಫ್ ಇಂಡಿಯಾದ ವಿವಿಧ ಬ್ರ್ಯಾಂಚ್ ಗಳಲ್ಲಿ ಖಾಲಿ ಇರುವ 400 ಅಪ್ರೆಂಟಿಸ್ ಹುದ್ದೆಗಳನ್ನು ತುಂಬಲಾಗುತ್ತಿದೆ. ಇದರಲ್ಲಿ ಕರ್ನಾಟದ ಬೆಳಗಾವಿ, ಬೆಂಗಳೂರಿನ ಬ್ರ್ಯಾಂಚ್ ಕೂಡ ಸೇರಿವೆ. ಅಪ್ರೆಂಟಿಸ್ ಹುದ್ದೆಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ 12 ಸಾವಿರ ರೂಪಾಯಿಗಳ ಸ್ಟೇ ಫಂಡ್ ನೀಡಲಾಗುತ್ತದೆ. 1961ರ ಅಪ್ರೆಂಟಿಸ್ ಕಾಯ್ದೆ ಅಡಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಯಾವುದೇ ಪದವಿ ಪಡೆದಿರುವವರು ಯಾರು ಬೇಕಾದರೂ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು.
ಬ್ಯಾಂಕ್ ಆಫ್ ಇಂಡಿಯಾದ ನೇಮಕಾತಿ 2025ರ ಅಧಿಕೃತ ಅಧಿಸೂಚನೆಯಂತೆ ಅರ್ಜಿ ನೋಂದಾಣಿ ಮುಗಿದ ನಂತರ, ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್ ಲೈನ್ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಪಾಸ್ ಆದವರನ್ನು ಸ್ಥಳೀಯ ಭಾಷೆಯ ಪರೀಕ್ಷೆ ಬರೆಯಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
APPRENTICE-ADVT-PROJ-2024-25-04-NOTICE-DT-01.01.2025
ಅರ್ಜಿ ಶುಲ್ಕವು ಎಸ್‌ಸಿ, ಎಸ್‌ಟಿ, ಮಹಿಳೆಯರಿಗೆ 600 ರೂಪಾಯಿ. ಪಿಡಬ್ಲ್ಯೂಬಿಡಿ ವರ್ಗಕ್ಕೆ 400 ರೂಪಾಯಿ. ಮತ್ತು ಇತರ ಎಲ್ಲ ವರ್ಗಗಳಿಗೆ ಜಿಎಸ್‌ಟಿ ಸೇರಿ 800 ರೂಪಾಯಿಗಳು ಆಗಿವೆ. ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಪಾವತಿಸಬೇಕು. ಅಧಿಕೃತ ವೆಬ್‌ಸೈಟ್ ಮೂಲಕ ನಿಗದಿತ ದಿನಾಂಕದ ಒಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. 01 ಮಾರ್ಚ್ 2025 ರಿಂದ 15 ಮಾರ್ಚ್ 2025 ಒಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.