ಕರಾವಳಿಸುಳ್ಯ

ಸುಳ್ಯ: ಬ್ಯಾಂಕಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನ ! ಬ್ಯಾಂಕ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ..!

69
Spread the love

ನ್ಯೂಸ್ ನಾಟೌಟ್: ಸಾಲ ಮರುಪಾವತಿ ಹಲವರಿಗೆ ತಲೆನೋವಾಗಿ ಪರಿಣಮಿಸುವುದು ಸಹಜ, ಆದರೆ ಹಲವರ ಸಮಸ್ಯೆಯನ್ನು ತಾಳ್ಮೆಯಿಂದ ಎದುರಿಸುತ್ತಾರೆ, ಆದರೆ ಇನ್ನು ಕೆಲವರು ದುಡುಕಿನ ನಿರ್ಧಾರದಿಂದ ಅನಾಹುತಗಳು ಸಂಭವಿಸುತ್ತವೆ. ಇಂತಹದ್ದೆ ಘಟನೆಯೊಂದು ಸುಳ್ಯದ ರಥಬೀದಿಯಲ್ಲಿ ನಡೆದಿದೆ. ಸಾಲದ ಕಂತು ಕಟ್ಟಲಾಗದೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿಯೊಬ್ಬ ಪೆಟ್ರೊಲ್ ಚೆಲ್ಲಿ ಬ್ಯಾಂಕ್ ಗೆ ಬೆಂಕಿಹಚ್ಚಲು ಯತ್ನಿಸಿದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

ಸುಳ್ಯದ ರಥಬೀದಿಯಲ್ಲಿರುವ ಸರಸ್ವತಿ ಬ್ಯಾಂಕ್ ಗೆ ನುಗ್ಗಿದ ಸ್ಥಳೀಯ ಪೂರಿ ಅಂಗಡಿ ನಡೆಸುತ್ತಿದ್ದ ಶಿವಣ್ಣ ಗೌಡ ಎಂಬ ವ್ಯಕ್ತಿ ಎಂದು ತಿಳಿದುಬಂದಿದೆ. ಫೆ.20 ರಂದು ರಥಬೀದಿಯ ಸರಸ್ವತಿ ಸೌಹಾರ್ಧ ಬ್ಯಾಂಕ್ ಗೆ 10 ಗಂಟೆ ಸುಮಾರಿಗೆ ನುಗ್ಗಿದ್ದು ತಾನು ಪಡೆದಿರುವ ಸಾಲದ ಕಂತಿನ ವಿವರದಲ್ಲಿ ಮಾತುಕಥೆ ನಡೆಸುತ್ತಾ ತಾನು ತಂದಿರುವ ಪೆಟ್ರೋಲ್ ಕ್ಯಾನ್ ನಿಂದ ಪೆಟ್ರೋಲ್ ಚೆಲ್ಲಿ ಈಗಲೇ ‌ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದಲ್ಲದೆ, ನೋಡ ನೋಡುತ್ತಿದ್ದಂತೆ ಪೆಟ್ರೋಲ್ ಚೆಲ್ಲಿ ಲೈಟರ್ ನಿಂದ ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ತಕ್ಷಣ ಜಾಗೃತರಾದ ಬ್ಯಾಂಕಿನ ಸಿಬ್ಬಂದಿಗಳು ಆತನನ್ನು ತಡೆದು ಪೋಲಿಸರಿಗೆ ಮಾಹಿತಿ ತಿಳಿಸಿದ್ದು, ಪೋಲಿಸರು ಸ್ಥಳಕ್ಕೆ ಧಾವಿಸಿ ಶಿವಣ್ಣ ಗೌಡನನ್ನು ಬಂಧಿಸಿದ್ದು, ಆತನ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ.


ಶಿವಣ್ಣ ಗೌಡ ಆಸ್ತಿ ಖರೀದಿಗೆ ಸರಸ್ವತಿ ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದರು, ಹಲವು ಕಂತು ಬಾಕಿಯಾಗಿದ್ದು, ಆಸ್ತಿ ಮುಟ್ಟುಗೂಲು ಹಾಕಲು ಬ್ಯಾಂಕ್ ತಯಾರಿ ನಡೆಸಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತ ಶಿವಣ್ಣ ಗೌಡ ಈ ಕೃತ್ಯಕ್ಕೆ ಯತ್ನಿಸಿದ್ದು, ಸರಸ್ವತಿ ಬ್ಯಾಂಕ್ ಸುಳ್ಯ ಶಾಖೆಯ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

See also  ಜಾಗದ ವಿಚಾರದಲ್ಲಿ ಗಲಾಟೆ, ಮನೆಯಂಗಳಕ್ಕೆ ನುಗ್ಗಿ ಜೀವ ಬೆದರಿಕೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು
  Ad Widget   Ad Widget   Ad Widget   Ad Widget