ಕ್ರೈಂವೈರಲ್ ನ್ಯೂಸ್

ಬ್ಯಾಂಕ್‌ ನ ಹಣವೆಲ್ಲ ತಪ್ಪಾಗಿ ಖಾತೆಗಳಿಗೆ ಜಮೆಯಾದದ್ದೇಗೆ? ₹820 ಕೋಟಿ ಜಮೆಯಾದ ಬಗ್ಗೆ ಬ್ಯಾಂಕ್ ಹೇಳಿದ್ದೇನು? ಇದು ಯಾವ ಬ್ಯಾಂಕ್?

ನ್ಯೂಸ್ ನಾಟೌಟ್ : ಯುಕೋ ಎಂಬ ಬ್ಯಾಂಕ್‌ನ ಐಎಂಪಿಎಸ್‌ ಸೇವೆಯಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷದಿಂದ ತಪ್ಪಾಗಿ ಹಲವು ಗ್ರಾಹಕರ ಖಾತೆಗೆ 820 ಕೋಟಿ ರೂಪಾಯಿ ಜಮೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.

ಇದರಲ್ಲಿ 649 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಬ್ಯಾಂಕ್‌ ಇಂದು (ನ.16) ರಂದು ಹೇಳಿಕೊಂಡಿದೆ. ಇನ್ನೂ 171 ಕೋಟಿ ರೂಪಾಯಿ ವಸೂಲಾಗಬೇಕಿದೆ ಎಂದು ತಿಳಿಸಿದೆ. ಈ ನಡುವೆ ಬ್ಯಾಂಕ್‌ ಐಎಂಪಿಎಸ್‌ ಸೇವೆಯನ್ನು ಸ್ಥಗಿತಗೊಳಿಸಿದೆ ಎನ್ನಲಾಗದೆ.
ಸಾರ್ವಜನಿಕ ವಲಯದ ಯುಕೋ ಬ್ಯಾಂಕ್‌ನ ಐಎಂಪಿಎಸ್‌ ಸೇವೆಯಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷದಿಂದ ತಪ್ಪಾಗಿ ಹಲವು ಗ್ರಾಹಕರ ಖಾತೆಗೆ ಜಮಾ ಆಗಿದೆ ಎನ್ನಲಾಗಿದೆ.ಅಗತ್ಯ ಕ್ರಮಕ್ಕಾಗಿ ಕಾನೂನು ಜಾರಿ ಸಂಸ್ಥೆಗಳಿಗೂ ಈ ವಿಷಯವನ್ನು ತಿಳಿಸಲಾಗಿದೆ ಎಂದು ಷೇರು ಮಾರುಕಟ್ಟೆಗಳಿಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಬ್ಯಾಂಕ್‌ ತಿಳಿಸಿದೆ. ಐಎಂಪಿಎಸ್‌ ವ್ಯವಸ್ಥೆಯಲ್ಲಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ತಕ್ಷಣವೇ ಹಣವನ್ನು ವರ್ಗಾಯಿಸಲಾಗುತ್ತದೆ ಈ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಈ ರೀತಿ ಆಗಿದೆ ಎನ್ನಲಾಗಿದೆ.
“ಬ್ಯಾಂಕ್, ಮುನ್ನೆಚ್ಚರಿಕೆ ಕ್ರಮವಾಗಿ ಐಎಂಪಿಎಸ್‌ ವಹಿವಾಟುಗಳನ್ನು ಸ್ಥಗಿತಗೊಳಿಸಿದೆ. ಸಮಸ್ಯೆಯನ್ನು ಪರಿಹರಿಸಲು ಮತ್ತು ಐಎಂಪಿಎಸ್‌ ಸೇವೆಗಳನ್ನು ಶೀಘ್ರವಾಗಿ ಮರುಸ್ಥಾಪಿಸಲು ಇದಕ್ಕೆ ಸಂಬಂಧಿಸಿದ ಎಲ್ಲರೊಂದಿಗೂ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ,” ಎಂದು ಯುಕೋ ಬ್ಯಾಂಕ್‌ ಹೇಳಿದೆ.
ಈ ಬೆಳವಣಿಗೆ ಬೆನ್ನಲ್ಲೇ ಗುರುವಾರ ಬಿಎಸ್‌ಇಯಲ್ಲಿ ಯುಕೊ ಬ್ಯಾಂಕ್ ಷೇರುಗಳು ಶೇ. 1.13ರಷ್ಟು ಕುಸಿದಿದ್ದು 39.35 ರೂ.ಗೆ ಇಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

Related posts

ಪ್ರಿಯತಮೆಯನ್ನು ಕೊಂದು ಮಣ್ಣಲ್ಲಿ ಹೂತಿಟ್ಟ ಪ್ರಕರಣದ ಬಗ್ಗೆ ಸತ್ಯ ಬಿಚ್ಚಿಟ್ಟ ಎಸ್ಪಿ..! ಕುಟುಂಬಸ್ಥರ ಸಮ್ಮುಖದಲ್ಲಿ ಮೃತದೇಹ ಹೊರ ತೆಗೆದ ಪೊಲೀಸರು..!

ಗೂನಡ್ಕ: ಸ್ಕೂಟಿ ಕದ್ದು ಬಂದವ ಹೋಟೆಲ್ ಶೌಚಾಲಯದಲ್ಲಿ ಗಡದ್ ನಿದ್ರೆಗೆ ಜಾರಿದ..!

ಕೊನೆಗೂ ಹನಿಟ್ರ್ಯಾಪ್ ಕಳ್ಳರು ಪೊಲೀಸರ ಬಲೆಗೆ ಬಿದ್ದರು