Latestಕ್ರೈಂದೇಶ-ವಿದೇಶಸಿನಿಮಾ

ಬಾಂಗ್ಲಾದ ಮಾಜಿ ಪ್ರಧಾನಿಯ ಬಯೋಪಿಕ್‌ ನಲ್ಲಿ ನಟಿಸಿದ್ದ ನಟಿ ಅರೆಸ್ಟ್ ..! ಶೇಖ್ ಹಸೀನಾ ಪಾತ್ರದಲ್ಲಿ ಅಭಿನಯಿಸಿದ್ದಾಕೆ ಮೇಲೆ ಕೊಲೆ ಆರೋಪ.!

499

ನ್ಯೂಸ್‌ ನಾಟೌಟ್: ಶೇಖ್ ಮುಜಿಬುರ್ ರೆಹಮಾನ್ ಬಯೋಪಿಕ್‌ ನಲ್ಲಿ ಬಾಂಗ್ಲಾ ಮಾಜಿ ಪ್ರಧಾನಿ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾದ ಖ್ಯಾತ ನಟಿ ನುಸ್ರತ್ ಫರಿಯಾರನ್ನ ಢಾಕಾ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

2024 ಜುಲೈನಲ್ಲಿ ಶೇಖ್ ಹಸೀನಾ ವಿರುದ್ಧ ನಡೆದ ಸಾಮೂಹಿಕ ದಂಗೆ ಸಂದರ್ಭದಲ್ಲಿ ಕೊಲೆಗೆ ಯತ್ನಿಸಿದ ಕೇಸ್‌ ನಲ್ಲಿ ನುಸ್ರತ್ ಫರಿಯಾರನ್ನ ಬಂಧಿಸಲಾಗಿದೆ. ಭಾನುವಾರ ಬೆಳಗ್ಗೆ ಥೈಲ್ಯಾಂಡ್‌ ಗೆ ತೆರಳುತ್ತಿದ್ದ ವೇಳೆ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ನುಸ್ರತ್ ಫರಿಯಾರನ್ನು ಬಂಧಿಸಿ ಢಾಕಾದ ವಟರಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2023ರಲ್ಲಿ ಬಿಡುಗಡೆಯಾದ `ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್’ ಚಿತ್ರದಲ್ಲಿ ಫರಿಯಾ ಹಸೀನಾ ಪಾತ್ರದಲ್ಲಿ ನುಸ್ರತ್ ಫರಿಯಾ ನಟಿಸಿದ್ದರು. ನಿರ್ದೇಶಕ ಶ್ಯಾಮ್ ಬೆನೆಗಲ್ ನಿರ್ದೇಶಿಸಿದ ಈ ಚಿತ್ರ, ಬಾಂಗ್ಲಾದೇಶ ಮತ್ತು ಭಾರತದ ಜಂಟಿಯಾಗಿ ನಿರ್ಮಾಣ ಮಾಡಿತ್ತು.

ನುಸ್ರತ್, ರೇಡಿಯೋ ಜಾಕಿ ಮತ್ತು ನಿರೂಪಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 2015ರಲ್ಲಿ ಬಿಡುಗಡೆಯಾದ `ಆಶಿಕಿ: ಟ್ರೂ ಲವ್’ ಚಿತ್ರದ ಮೂಲಕ ನುಸ್ರತ್ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದರು. ನುಸ್ರತ್ ಭಾರತೀಯ ಚಿತ್ರಗಳಲ್ಲೂ ನಟಿಸಿದ್ದು, ಮಾಡೆಲಿಂಗ್‌ ನಲ್ಲಿ ಸಕ್ರಿಯರಾಗಿದ್ದರು.

ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು..! ಕರ್ನಾಟಕದ ಮೂವರು ಆಂಧ್ರದಲ್ಲಿ ಸಾವು..!

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಹುಟ್ಟುಹಬ್ಬಕ್ಕೆ ಮೋದಿ, ಸಿದ್ದರಾಮಯ್ಯ ಸೇರಿ ಹಲವು ಗಣ್ಯರಿಂದ ಶುಭಾಶಯ, ದೇವೇಗೌಡರ ನಿವಾಸಕ್ಕೆ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಭೇಟಿ

ಭಾರತದ ಸೇನಾ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿದ್ದ ಹರಿಯಾಣದ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ ಅರೆಸ್ಟ್..! ದಾಳಿಗೂ ಮುಂಚೆ ಪಹಲ್ಗಾಮ್ ಗೆ ಬಂದಿದ್ದ ಜ್ಯೋತಿ..!

See also  ಇನ್ನು ಮುಂದೆ ವಾಟ್ಸ್ ಆ್ಯಪ್ ಮೂಲಕವೂ ಪೊಲೀಸರಿಗೆ ದೂರು ನೀಡಬಹುದು..! ದಾಖಲಾಯ್ತು ಮೊದಲ ಡಿಜಿಟಲ್ ಎಫ್‌.ಐ.ಆರ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget