ಕ್ರೈಂಬೆಂಗಳೂರು

ಪ್ರಿಯಕರನೆದುರೇ ಯುವತಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕರಿಗೆ ಜೀವಾವಧಿ ಶಿಕ್ಷೆ, ಕ್ರೌರ್ಯವೆಸಗಿದವರಿಗೆ ತಕ್ಕ ಶಾಸ್ತಿ

220

ನ್ಯೂಸ್ ನಾಟೌಟ್: ರಾತ್ರಿ ಊಟ ಮುಗಿಸಿ ವಾಪಾಸಾಗುತ್ತಿದ್ದ ಪ್ರೇಮಿಗಳನ್ನು ಅಡ್ಡ ಹಾಕಿ ಯುವಕನಿಗೆ ಮಾರಕಾಸ್ತ್ರ ತೋರಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ ಕಾಮುಕರಿಗೆ 10 ವರ್ಷಗಳ ಬಳಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

2014ರ ಏಪ್ರಿಲ್ 11ರಂದು ಪ್ರೇಮಿಗಳಿಬ್ಬರು ರಾತ್ರಿ ಡಿನ್ನರ್ ಮುಗಿಸಿ ಎಂ.ಜಿ ರೋಡ್‌ನಲ್ಲಿ ಡಿನ್ನರ್ ಮುಗಿಸಿ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ (Bengaluru News) ನೇತಾಜಿ ರಸ್ತೆಯಲ್ಲಿ ಮಧ್ಯರಾತ್ರಿ 12.30ರ ಸಮಯಲ್ಲಿ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಕಾಮುಕರ ದಂಡು ಅವರನ್ನು ಸುತ್ತುವರಿದು ಕಾರು ಏರಿ ಕಿರುಕುಳ ಕೊಡಲಾರಂಭಿಸಿದರು.

ಈ ವೇಳೆ ಶೇಕ್ ಹೈದರ್, ಸೈಯದ್ ಶಫಿಕ್, ಮಹಮ್ಮಸ್ ಹಫೀಜ್, ಶೋಯಬ್ ಯಾನೆ ಶೇಖ್ ಕಲ್ವಾನ , ಮಹಮ್ಮದ್ ಇಸಾಕ್ ಎಂಬುವರು ಕಾರಿನಲ್ಲಿ ಆ ಯುವತಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡಿದ್ದರು. ಬಳಿಕ ರಾತ್ರಿಯಿಡಿ ಸಂತ್ರಸ್ತೆ ಕಾರಿನಲ್ಲೇ ಪುಲಕೇಶಿ ನಗರ ಸುತ್ತಾಡಿದ್ದರು. ಕೊನೆಗೆ ಕಾಮುಕರ ಗುಂಪಿನ ನಾಯಕ ಶೇಕ್ ಹೈದರ್ ಆಜ್ಞೆಯಂತೆ ಸಂತ್ರಸ್ತೆಯ ಸ್ನೇಹಿತನನ್ನು ಕಾರಿನಿಂದ ಇಳಿಸಿದ್ದರು. ಸೈಯದ್ ಶಫಿಕ್, ಹಫಿಜ್, ಶೋಯಬ್ ಆ ಯುವಕನ ಕುತ್ತಿಗೆಗೆ ಚಾಕು ಹಿಡಿದು ಕೊಂಡಿದ್ದರು. ಕಾರಿನಲ್ಲಿದ್ದ ಶೇಕ್ ಹೈದರ್ ನಾನು ಹೇಳಿದ ಹಾಗೆ ಕೇಳದಿದ್ದರೆ ನಿನ್ನ ಹುಡುಗನನ್ನು ಕೊಲೆ ಮಾಡುತ್ತೇನೆ ಎಂದು ಯುವತಿಗೆ ಬೆದರಿಕೆ ಹಾಕಿದ್ದ. ನಂತರ ಯುವತಿ ಮೇಲೆ ಮೃಗೀಯ ರೀತಿ ವರ್ತಿಸಿದ್ದ. ತನ್ನ ಕಣ್ಣ ಮುಂದೆಯೇ ತನ್ನ ನಂಬಿ ಬಂದ ಪ್ರೇಯಸಿ ಮೇಲೆ ಕಾಮುಕರು ಪಿಶಾಚಿಗಳಂತೆ ಎಗರಿದ್ದರೂ ಏನು ಮಾಡಲು ಆಗದೆ ಅಸಹಾಯಕನಾಗಿದ್ದ. ಯುವತಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ 50 ಸಾವಿರ ರೂ. ಗೆ ಡಿಮ್ಯಾಂಡ್ ಮಾಡಿದ್ದರು. ಹಣ ನೀಡದಿದ್ದಾಗ ಹುಡುಗನ ಕೈಯಲ್ಲಿದ್ದ ವಾಚ್ ಕಿತ್ತುಕೊಂಡು ಹೋಗಿದ್ದರು. ಈ ಘಟನೆ ಸಂಬಂಧ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐವರು ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿತ್ತು.

ಕಾರಿನಲ್ಲಿ ಸಿಕ್ಕ ಆರೋಪಿಯ ತಲೆಕೂದಲು ಮತ್ತು ವೀರ್ಯದ ಕುರುಹುಗಳು ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿತ್ತು. ಆರೋಪಿಗಳು ರಾಜಕೀಯ ಪ್ರಭಾವ ಹೊಂದಿದ್ದರೂ ಇದ್ಯಾವುದಕ್ಕೂ ಮಣಿಯದ ಪೊಲೀಸರು ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳ ಪೈಕಿ ಎ1 ಆರೋಪಿ ಶೇಕ್ ಹೈದರ್‌ಗೆ ಜೀವಾವಧಿ ಶಿಕ್ಷೆ 31 ಸಾವಿರ ದಂಡ ಹಾಗೂ ಎ2 ಸೈಯದ್ ಶಫಿಕ್ 10 ವರ್ಷ ಸಜೆ 23 ಸಾವಿರ ದಂಡ, ಎ3 ಮೊಹಮ್ಮದ್ ಹಫೀಜ್ ಗೆ 3500 ದಂಡ, ಎ4 ಶೋಯಬ್ ಗೆ 1 ವರ್ಷ ಸಜೆ ಹಾಗೂ 3500 ದಂಡ ಹಾಗೂ ಎ5 ಮಹಮ್ಮದ್ ಇಸಾಕ್ ಗೆ 6 ತಿಂಗಳ ಸಜೆ ಹಾಗೂ 3000 ದಂಡ ವಿಧಿಸಿ 57ನೇ ಸಿಸಿಹೆಚ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget