Latestಬೆಂಗಳೂರು

ಕರ್ನಾಟಕದ ಬ್ರ್ಯಾಂಡ್ ನಂದಿನಿಗೆ ಕರ್ನಾಟಕದಲ್ಲೇ ನಿರ್ಲಕ್ಷ್ಯ..? ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಅಮುಲ್ ಗೆ ಸ್ಥಾನ..!

645

ನ್ಯೂಸ್ ನಾಟೌಟ್: ಬಿಎಂಆರ್ ​ಸಿಎಲ್ (Bangalore Metro Rail Corporation Limited) ಮತ್ತೊಮ್ಮೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಕರ್ನಾಟಕದ ಬ್ರ್ಯಾಂಡ್ ನಂದಿನಿ ಮತ್ತೊಮ್ಮೆ ಬೆಂಗಳೂರಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಜನಪ್ರಿಯ ಡೈರಿ ಕಂಪನಿ ಅಮುಲ್ (Amul) ಮಳಿಗೆ ತೆರೆಯಲು ಬಿಎಂಆರ್ ​​ಸಿಎಲ್ ಒಪ್ಪಂದ ಮಾಡಿಕೊಂಡಿದೆ.

ನಗರದ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಮಳಿಗೆ ತೆರೆಯಲು ಒಪ್ಪಂದ ನಡೆದಿದೆ. ಬಿಎಂಆರ್ ​ಸಿಎಲ್ ಈ ನಡೆ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣ, ಇಂದಿರಾನಗರ, ಬೈಯಪ್ಪನಹಳ್ಳಿ ಮೆಟ್ರೋ, ಟ್ರಿನಿಟಿ, ಜಯನಗರ ಸೇರಿ ಹತ್ತು ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಮಳಿಗೆಗಳು ಓಪನ್ ಆಗಿವೆ. ಕರ್ನಾಟಕದಲ್ಲಿ ನಂದಿನಿ‌ ಇದ್ದರೂ ಅಮುಲ್ ಜೊತೆ ಒಪ್ಪಂದ ಯಾಕೆ ಎಂಬ ಪ್ರಶ್ನೆಯನ್ನು ಜನ ಎತ್ತಿದ್ದಾರೆ.

ಸತತ ಎರಡನೇ ದಿನವೂ ಸಾಲು-ಸಾಲು ಏರ್ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷ..! ಜೊತೆಗೆ ಇಂಡೋನೇಷ್ಯಾದ ಬಾಲಿ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟ..!

See also  ರಾಮೇಶ್ವರಂ ಕೆಫೆಯಲ್ಲಿ ಬಾಂಬಿಟ್ಟವನಿಗೆ ವಿದೇಶದಿಂದ ಬಂದಿತ್ತಾ ಹಣ..? ಗುಪ್ತಚರ ಇಲಾಖೆಗೆ ಸ್ಫೋಟದ ಇಂಚಿಂಚೂ ಮಾಹಿತಿ ಲಭ್ಯ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget