Latest

ರಾಜಧಾನಿ ಬೆಂಗಳೂರಿನಲ್ಲಿ ಬುಸ್ ಬುಸ್ ನಾಗಪ್ಪ..!ಮನೆಯೊಳಗೆ ಕಾಣಿಸಿಕೊಂಡ ಹಾವುಗಳನ್ನು ಕಂಡು ಭಯಭೀತರಾದ ಜನ!

591

ನ್ಯೂಸ್‌ ನಾಟೌಟ್: ಬಿರು ಬಿಸಿಲಿನ ಜತೆಗೆ ಬದಲಾದ ವಾತಾವರಣದಿಂದಾಗಿ ಹಾವುಗಳು ತಮ್ಮ ವಾಸ ಸ್ಥಾನಗಳಿಂದ ಹೊರಗಡೆ ಬರುತ್ತಿವೆ. ಅದರಲ್ಲೂಬೆಂಗಳೂರಿನ ಹಲವೆಡೆ ಹಾವು ಗಳು ತಮ್ಮ ವಾಸಸ್ಥಾನಗಳಿಂದ ಹೊರಬಂದು ಆತಂಕವನ್ನೇ ಸೃಷ್ಟಿಸಿವೆ.ಹಲವರ ಮನೆಗೆ ಹಾವುಗಳು ನುಗ್ಗಿದ್ದು, ಭಯದ ವಾತಾವರಣ ಉಂಟಾಗಿದೆ.ಕಳೆದ ವಾರವೂ ಥಣಿಸಂದ್ರದ ಟೆನಿಸ್ ಕ್ಲಬ್‌ ಒಂದಕ್ಕೆ ನುಗ್ಗಿದ ಕೊಳಕುಮಂಡಲ ಹಾವು ಒಂದು ಕ್ಷಣ ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ಬಂದಿದ್ದ ಉರಗ ತಜ್ಞ ಮೋಹನ್‌ ಹಾವನ್ನು ರಕ್ಷಿಸಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಮಳೆಗಾಲಕ್ಕೂ ಮೊದಲೇ ಹಾವು ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.

ಇನ್ನು ನಗರದ ಹಲವೆಡೆ ಹಾವುಗಳು ಕಾಣಿಸಿಕೊಂಡಿರುವ ಕುರಿತು ಪ್ರತಿದಿನ ಉರಗ ತಜ್ಞರಿಗೆ ನೂರಾರು ಕರೆಗಳು ಬರುತ್ತಿದ್ದವೆಯಂತೆ.ಪ್ರತಿ ದಿನವೂ ದಿನಕ್ಕೆ 30 ರಿಂದ 40 ಹಾವುಗಳನ್ನು ಹಿಡಿದು ಸುರಕ್ಷಿತ ಪ್ರದೇಶಗಳಿಗೆ ಬಿಟ್ಟು ಬರುತ್ತಿದ್ದು, ಸಾಮಾನ್ಯ ದಿನಕ್ಕೆ ಹೋಲಿಸಿದರೆ ಈಗ 5 ಪಟ್ಟು ಹೆಚ್ಚು ಕರೆಗಳು ಬರುತ್ತಿವೆ ಎನ್ನುತ್ತಾರೆ ಉರಗ ತಜ್ಞರು. ಬೇಸಿಗೆ ಕಾಲ ಆಗಿರೋದ್ರಿಂದ ಬಿಸಿಲಿನ ಬೇಗೆ ತಾಳಲಾರದೇ ಹುತ್ತ ಹಾಗೂ ಬಿಲಗಳಿಂದ ಹಾವುಗಳು ಹೊರ ಬೀಳುತ್ತಿವೆ.ಹೀಗಾಗಿ ಹಾವುಗಳು ತಂಪಾದ ವಾತಾವರಣ ಇರುವ ಕಡೆ ಹೋಗುತ್ತವೆ. ಹಾಗೆ, ಮಳೆಗಾಲದಲ್ಲಿ ಬೆಚ್ಚನೆ ಸ್ಥಳ, ಆಹಾರದ ಮೂಲಗಳನ್ನು ಹುಡುಕುತ್ತವೆ.

ಇತ್ತ  ಬೆಂಗಳೂರಿನಲ್ಲಿ ಭಾರೀ ಮಳೆಯ ಕಾರಣ ತೀರಾ ಸಮಸ್ಯೆ ಏರ್ಪಟ್ಟಿದೆ.ಬೆಂಗಳೂರಿನಲ್ಲಿ ಒಮ್ಮ ಮಳೆ ಬಂದರೆ ಅಲ್ಲಿ ನೂರಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಳೆ ನೀರಿನಿಂದ ರಾಜಕಾಲುವೆ, ಮೋರಿ, ಒಳಚರಂಡಿಗಳು ತುಂಬಿಕೊಂಡು ಜನರಿಗೆ ಭಾರಿ ಸವಾಲಾಗಿ ಪರಿಣಮಿಸುತ್ತಿವೆ.ಹೀಗಾಗಿ, ಅವುಗಳಲ್ಲಿ ವಾಸಿಸುತ್ತಿದ್ದ, ಹಾವುಗಳು ಪಕ್ಕದ ಮನೆಗಳಿಗೆ ನುಗ್ಗುತ್ತಿವೆ ಎಂದು ಹೇಳಲಾಗಿದೆ.ಅದರಲ್ಲೂ ವೈಟ್‌ ಟಾಪಿಂಗ್ ಕಾಮಗಾರಿಗಳಿಂದ ಕಾಂಕ್ರೀಟ್‌ ರಸ್ತೆಗಳು ಹೆಚ್ಚಾಗಿದ್ದು, ಕುಡಿಯುವ ನೀರು, ಆಹಾರ ಸಿಗದೆ ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾವುಗಳು ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಬೆಂಗಳೂರಿನ ವಿದ್ಯಾರಣ್ಯಪುರ, ಥಣಿಸಂದ್ರ, ರಿಚ್‌ಮಂಡ್ ರಸ್ತೆ, ನಾಗರಬಾವಿ, ಜೆ.ಪಿ. ನಗರ, ಹೆಬ್ಟಾಳ, ಕೆ.ಆರ್‌.ಪುರ, ಎಚ್‌ಆರ್‌ಎಸ್‌ ಲೇಔಟ್‌, ಕೋರ ಮಂಗಲ, ಬನಶಂಕರಿ, ಕೆಂಗೇರಿ, ಯಲಹಂಕ, ಬಾಣಸವಾಡಿ, ರಾಜಭವನ ಭಾಗ ಗಳಿಂದ ಹೆಚ್ಚು ಹಾವು ಕಾಣಿಸಿಕೊಂಡ ಕುರಿತು ಕರೆಗಳು ಬರುತ್ತಿವೆ. ಇದರ ಜತೆಗೆ ನಗರದ ಇತರ ಪ್ರದೇಶಗಳಲ್ಲೂ ಹಾವುಗಳು ಕಾಣಿಸಿಕೊಂಡ ಬಗ್ಗೆ ಮಾಹಿತಿಯಿದೆ. ಪ್ರಸುತ್ತ ದಿನಗಳಲ್ಲಿ ನಾಗರ ಹಾವುಗಳೇ ಹೆಚ್ಚು ಪತ್ತೆಯಾಗಿದ್ದು, ಉಳಿದಂತೆ ಕೊಳಕಮಂಡಲ, ಹುರಿ ಮಂಡಲ, ಕೆರೆ/ನೀರಾವು ಹೆಚ್ಚಾಗಿವೆ ಎನ್ನುವುದು ಉರಗ ತಜ್ಞರ ಅಭಿಪ್ರಾಯ.

See also  80 ದೇಶಗಳು ಭಾರತದಿಂದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿವೆ..!ಇಸ್ಲಾಂ ರಾಷ್ಟ್ರಗಳಿಂದಲೂ ಬೇಡಿಕೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget