ಬೆಂಗಳೂರು

ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಗಂಭೀರ, ಕಾರು ಡಿಕ್ಕಿ ರಭಸಕ್ಕೆ ೭ ಅಡಿ ಮೇಲೆ ಹಾರಿ ಬಿದ್ದ ಯುವತಿ

ನ್ಯೂಸ್ ನಾಟೌಟ್ : ರಸ್ತೆ ದಾಟುತ್ತಿದ್ದಾಗ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯೊಬ್ಬರು ೭ ಅಡಿ ಮೇಲೆ ಹಾರಿ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಯುವತಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಘಟನೆ ?

ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಮೈಸೂರು ರಸ್ತೆಯ ಆರ್‌.ವಿ.ಕಾಲೇಜು ಬಳಿ ನಡೆದಿದೆ.ಹುಬ್ಬಳ್ಳಿ ಮೂಲದ ಸ್ವಾತಿ(21) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಸಿಟಿವಿ ಹೇಳಿದ ಸಾಕ್ಷಿ:

 ಫೆ.2ರಂದು ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದ್ದು, ಕಾರು ಡಿಕ್ಕಿಯ ರಭಸಕ್ಕೆ ವಿದ್ಯಾರ್ಥಿನಿ ಏಳೆಂಟು ಅಡಿ ಮೇಲಕ್ಕೆ ಹಾರಿ ಕೆಳಗೆ ಬಿದ್ದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕ ಎಂಬಿಬಿಎಸ್‌ ವಿದಾರ್ಥಿ ಕೃಷ್ಣ (20) ಎಂಬಾತನನ್ನು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸಿಸಿಟಿವಿ ಇದ್ದಿರುವುದರಿಂದ ಅಪಘಾತದ ದೃಶ್ಯಗಳ ಮೂಲಕ ವಿದ್ಯಾರ್ಥಿನಿ ಏಳೆಂಟು ಅಡಿ ಮೇಲಕ್ಕೆ ಹಾರಿ ಕೆಳಗೆ ಬಿದ್ದಿರುವ ದೃಶ್ಯ ಸೆರೆಯಾಯಿತು.ಸದ್ಯ ವಿದ್ಯಾರ್ಥಿನಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ.

Related posts

ಬಿಜೆಪಿ ನಾಯಕ ಪ್ರತಾಪ್ ಸಿಂಹ ನ್ಯೂ ಹೇರ್ ಸ್ಟೈಲ್..! ‘ಬೈ ಬೇಡ್ರೋ .. ಹುಣಸೂರು ಆದಿವಾಸಿ ಹೇರ್ ಆಯಿಲ್ ಜಾಹೀರಾತು..!’

Challenging Star Darshan arrested: ನಟ ದರ್ಶನ್ ಹಾಗೂ ಸಹಚರರಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿದ್ದೇನು..? ಇಲ್ಲಿದೆ ಡಿಟೇಲ್ಸ್

ನವಜಾತ ಶಿಶುವನ್ನು ದೇವಸ್ಥಾನದಲ್ಲಿ ಬಿಟ್ಟು ಹೋದ ಹೆತ್ತವರು! ಮಾನವೀಯತೆ ಮೆರೆದ ಪೊಲೀಸರು!