ನ್ಯೂಸ್ ನಾಟೌಟ್: ಬಹುದಿನಗಳಿಂದ ಸಂಸದ ತೇಜಸ್ವಿ ಸೂರ್ಯ ಅವರ ಮದುವೆ ಬಗ್ಗೆ ಚರ್ಚೆಯಲ್ಲಿತ್ತು. ಇದೀಗ ಆ ಸುಂದರ ಘಳಿಗೆಗೆ ಸಮಯ ಕೂಡಿ ಬಂದಿದೆ. ಸಂಸದ ತೇಜಸ್ವಿ ಸೂರ್ಯ ಹಾಗೂ ಮತ್ತು ತಮಿಳುನಾಡಿನ ಗಾಯಕಿ, ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರ ಮದುವೆ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ಇಂದು ನಡೆಯತ್ತಿದೆ.
ಮದುವೆಯ ಮೊದಲ ದಿನ ಬುಧವಾರ ಸಂಜೆ ವರಪೂಜೆ ಕಾರ್ಯಕ್ರಮ ನಡೆದಿದ್ದು,ಕುಟುಂಬರ್ಸತರು ಭಾಗಿಯಾಗಿದ್ದರು. ಇಂದು ಶುಭ ದಿನದಂದು ಬೆಳಗ್ಗೆ ಕಾಶಿಯಾತ್ರೆ, ಜೀರಿಗೆ ಬೆಲ್ಲ ಧಾರೆ, ನಿರೀಕ್ಷಣೆ ಮುಹೂರ್ತ, ಮಾಂಗಲ್ಯಧಾರಣೆ ಹಾಗೂ ಲಾಜಾ ಹೋಮ ನಡೆಸಲಾಗುತ್ತದೆ. ಬೆಳಗ್ಗೆ 9.30 ರಿಂದ 10.15ರ ನಡುವಿನ ತುಲಾ ಲಗ್ನದಲ್ಲಿ ವಧು ಶಿವಶ್ರೀ ಸ್ಕಂದಪ್ರಸಾದ್ ಅವರನ್ನ ತೇಜಸ್ವಿ ಸೂರ್ಯ ವರಿಸಲಿದ್ದಾರೆ.
ಬಳಿಕ ತೇಜಸ್ವಿ ಸೂರ್ಯರ ಗಿರಿನಗರ ನಿವಾಸದಲ್ಲಿ ವಧುವನ್ನು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮವೂ ನೆರವೇರಲಿದೆ. ಮಾ.9 ರಂದು ಬೆಳಗ್ಗೆ 10.30ರಿಂದ 1.30ರವರೆಗೆ ಆರತಕ್ಷತೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿಗಳೂ,ಸಂಸದರು,ಸಚಿವರು,ಶಾಸಕರು ಸೇರಿದಂತೆ ಹಿರಿಯ ರಾಜಕಾರಣಿಗಳು,ಬಿಜೆಪಿ ಮುಖಂಡರು ಹಾಗೂ ಇತರೆ ಪಕ್ಷಗಳ ಮುಖಂಡರು ಫಿಲ್ಮ್ ಇಂಡಸ್ಟ್ರೀಯವರು ಕೂಡ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
View this post on Instagram