ಕರಾವಳಿ

ಬಂದಾರು: ವಿಕೋಪಕ್ಕೆ ತಿರುಗಿದ ಜಾನುವಾರುಗಳ ಚರ್ಮಗಂಟು ರೋಗ, 30 ಹಸುಗಳಲ್ಲಿ 7 ಹಸುಗಳು ಸಾವು

414

ನ್ಯೂಸ್ ನಾಟೌಟ್‌: ಜಾನುವಾರುಗಳ ಚರ್ಮಗಂಟು ರೋಗ ಕರಾವಳಿಯಲ್ಲಿ ವಿಪರೀತ ಮಟ್ಟಕ್ಕೆ ತಿರುಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ 2 ನೇ ವಾರ್ಡ್ ನ ಮುರ ಪಚ್ಚಡ್ಕ ನಿವಾಸಿ ಬಿತೂರು ಎಂಬವರ ಸುಮಾರು 30 ದನಗಳಲ್ಲಿ ಚರ್ಮಗಂಟು ರೋಗ ಸಂಭವಿಸಿದೆ. ರೋಗದ ತೀವ್ರತೆಯಿಂದ 7 ದನಗಳು ಪ್ರಾಣಬಿಟ್ಟಿದೆ ಎಂದು ವರದಿಯಾಗಿದೆ.

ಮಾನವೀಯತೆಯ ನೆಲೆಯಲ್ಲಿ ಬಂದಾರು ಗ್ರಾಮ ಪಂಚಾಯತ್ ವತಿಯಿಂದ ಸತ್ತಿರುವ ದನಗಳನ್ನು ಪಶು ವೈದ್ಯರ ನಿಗಾದ ಮೇಲೆ ಜೆಸಿಬಿ ಮೂಲಕ ಗುಂಡಿ ತೆಗೆದು ದಪನ ಮಾಡಲಾಯಿತು. ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಕೆ.ಗೌಡ, ಉಪಾಧ್ಯಕ್ಷ ಗಂಗಾಧರ, ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ, ದಿನೇಶ್ ಗೌಡ ಖಂಡಿಗ, ಮಂಜುಶ್ರೀ,ಸಿಬ್ಬಂದಿ ಪ್ರವೀಣ್ ಗೌಡ ಹಾಗೂ ಸ್ಥಳೀಯರಾದ ಮುಸನ್ ಪಚ್ಚಡ್ಕ , ಮುರ ಉಪಸ್ಥಿತರಿದ್ದರು.

See also  ಕಾರ್ಕಳ : ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಸಭೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget