ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಬ್ಯಾಂಡೇಜ್ ಬದಲಿಸಲು ಬಂದ ಅಪ್ರಾಪ್ತರು ವೈದ್ಯನನ್ನು ಗುಂಡಿಕ್ಕಿ ಕೊಂದು ಪರಾರಿ..! ಇಲ್ಲಿದೆ ಸಂಪೂರ್ಣ ಕಹಾನಿ..!

31
Spread the love

ನ್ಯೂಸ್ ನಾಟೌಟ್: 55 ವರ್ಷದ ವೈದ್ಯನನ್ನು ಇಬ್ಬರು ಅಪ್ರಾಪ್ತರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದಿಲ್ಲಿಯ ಜೈತ್ಪುರದ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ನಡೆದಿದೆ.
ಡಾ. ಜಾವೇದ್ ಅಖ್ತರ್(55) ಹತ್ಯೆಯಾದ ವೈದ್ಯ ಎಂದು ವರದಿ ತಿಳಿಸಿದೆ.

16 ಮತ್ತು 17ರ ಹರೆಯದ ಇಬ್ಬರು ಅಪ್ರಾಪ್ತರು ನಿಮಾ ಆಸ್ಪತ್ರೆಗೆ ತೆರಳಿ ಗಾಯಗೊಂಡ ಕಾಲ್ಬೆರಳಿಗೆ ಹಾಕಲಾಗಿದ್ದ ಬ್ಯಾಂಡೇಜ್ ಬದಲಾಯಿಸುವಂತೆ ಕೇಳಿಕೊಂಡಿದ್ದಾರೆ. ಇದಾದ ಬಳಿಕ ನಮಗೆ ಪ್ರಿಸ್ಕ್ರಿಪ್ಷನ್ ಬೇಕು ಎಂದು ಡಾ. ಜಾವೇದ್ ಅಖ್ತರ್ ಅವರ ಕ್ಯಾಬಿನ್ಗೆ ಹೋಗಿ ಅವರ ಮೇಲೆ ಗುಂಡಿನ ದಾಳಿಯನ್ನು ನಡೆಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಆಸ್ಪತ್ರೆಯೊಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Click

https://newsnotout.com/2024/10/father-love-on-son-and-bike-got-burned-kannada-news-viral-news/
See also  ಮುರುಘಾ ಶ್ರೀಗೆ ಮತ್ತೆ 4 ತಿಂಗಳು ಜೈಲು..! ಜಾಮೀನು ಸಿಕ್ಕ ಮೇಲೂ ಸ್ವಾಮೀಜಿ ಮತ್ತೆ ಜೈಲು ಸೇರಿದ್ದೇಗೆ..?
  Ad Widget   Ad Widget   Ad Widget