ಕಾಸರಗೋಡುಸುಳ್ಯ

ಬಂದಡ್ಕ: ಕಟ್ಟಕೋಡಿ ಕುಟುಂಬದ ಶ್ರೀ ವಿಷ್ಣುಮೂರ್ತಿ, ಧರ್ಮದೈವ, ಉಪದೈವಗಳ ಧರ್ಮ ನಡಾವಳಿ

214

ನ್ಯೂಸ್ ನಾಟೌಟ್: ಫೆ.16 ಮತ್ತು17ರಂದು ಕಾಸರಗೋಡು ಬಂದಡ್ಕ ಕಟ್ಟಕೋಡಿ ಕುಟುಂಬದಲ್ಲಿ ಶ್ರೀ ‌ವಿಷ್ಣುಮೂರ್ತಿ ಶ್ರೀ ಧರ್ಮದೈವ ಹಾಗೂ ಉಪದೈವಗಳ ಧರ್ಮನಡಾವಳಿ ನಡೆಯಿತು.

ಫೆ.16ರಂದು ಬೆಳಗ್ಗೆ ಉಗ್ರಾಣ ತುಂಬಿಸಲಾಯಿತು. ಬಳಿಕ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೈವಗಳ ಕೂಡುವಿಕೆ ನಡೆದು, ಪೊಟ್ಟ, ಪಂಜುರ್ಲಿ, ಕೊರತಿ ಹಾಗೂ ಉಪದೈವಗಳ ನೃತ್ಯ ಕೋಲ ನಡೆಯಿತು.

ಫೆ.17ರಂದು ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ಮತ್ತು ಮೊಡಚಾಮುಂಡಿ ದೈವಗಳ ನಡಾವಳಿ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನಂತರ ಅಂಗಾರ, ಗುಳಿಗ ದೈವಗಳ ನೇಮ ನಡೆಯಿತು. ಕುಟುಂಬಸ್ಥರು, ಊರವರು ಸೇರಿ ಸಾವಿರಾರು ಮಂದಿ‌ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

https://newsnotout.com/2024/02/midday-meal-free-for-mlas/
See also  ಸುಳ್ಯ: ಸ್ಥಳೀಯ ವಾರ ಪತ್ರಿಕೆಯ ವರದಿಗಾರನಿಗೆ ಜೀವ ಬೆದರಿಕೆ ಹಾಕಿದ ಬಿಎಸ್ಎನ್ಎಲ್ ಗುತ್ತಿಗೆ ನೌಕರ..! ಪೊಲೀಸ್ ಠಾಣೆ ಮೆಟ್ಟಿಲೇರಿದ ವರದಿಗಾರ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget