ಕರಾವಳಿಸುಳ್ಯ

ಬಳ್ಪ: ಪ್ರಗತಿ ಅಚ್ಚು ಸೇರಿದಂತೆ ಮೂವರಿಗೆ ಸನ್ಮಾನ, ಕೃಷ್ಣಾಷ್ಟಮಿ ಕಾರ್ಯಕ್ರಮದಲ್ಲಿ ಆಪತ್ಬಾಂಧವರಿಗೆ ಗೌರವ

ನ್ಯೂಸ್ ನಾಟೌಟ್: ಸಮಾಜ ಸೇವಕ, ಪ್ರಗತಿ ಆಂಬ್ಯುಲೆನ್ಸ್ ಚಾಲಕರಾಗಿರುವ ಅಚ್ಚು (ಅಬ್ದುಲ್ ರಝಾಕ್) ಸೇರಿದಂತೆ ಮೂವರಿಗೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಅಡ್ಡಬೈಲು ಇಲ್ಲಿ ಭಾನುವಾರ (ಜೂ.25) ಸನ್ಮಾನ ನಡೆಸಲಾಯಿತು.

ಶ್ರೀಮುತ್ತಪ್ಪನ್ ಆಂಬ್ಯುಲೆನ್ಸ್ ಚಾಲಕ ಅಭಿಲಾಷ್ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಚಿದಾನಂದ ಮಾಡನಕಜೆ ಅವರನ್ನು ಕೂಡ ಇದೇ ವೇಳೆ ಸನ್ಮಾನಿಸಲಾಯಿತು. ಹಲವಾರು ಕೊಳೆತ ಶವ ಹಾಗೂ ಅನಾಥ ಶವಗಳನ್ನು ಎತ್ತಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿರುವ ಅಚ್ಚು ಇತ್ತೀಚೆಗೆ ಬಳ್ಪ ಗ್ರಾಮದ ಅಕ್ಕೇನಿಯ ಅಶೋಕ್ ಎಂಬವರು ನೀರಿನಲ್ಲಿ ಶವವಾಗಿ ದೊರೆತ ಸಂದರ್ಭದಲ್ಲಿ ತಮ್ಮ ಸ್ನೇಹಿತ ಚಿದಾನಂದ ಮಾಡನಕಜೆ ಅವರೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ಅಚ್ಚುವಿನ ಆಪ್ತ ಗೆಳೆಯ ಅಭಿಲಾಷ್ ಕೂಡ ಕಾರ್ಯಾಚರಣೆಗೆ ಸಾಥ್ ನೀಡಿದ್ದರು.

Related posts

ಉಪ್ಪಿನಂಗಡಿ: ಹೃದಯ ಸಂಬಂಧಿತ ಕಾಯಿಲೆಗೆ 10ನೇ ತರಗತಿ ವಿದ್ಯಾರ್ಥಿ ಬಲಿ,ಇನ್ನೂ ಬಾಳಿ ಬದುಕಬೇಕಾಗಿದ್ದ ಪುತ್ರನ ಅಗಲುವಿಕೆಗೆ ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಸಿಎಂ ಬೊಮ್ಮಾಯಿಗೆ ಕೋವಿಡ್ ದೃಢ

ಸುಳ್ಯ: ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಧನ್ವಂತರಿ ಹಾಲ್‌ನಲ್ಲಿ ಯೋಗ ತರಬೇತಿ ಕಾರ್ಯಕ್ರಮ;ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಮೊದಲನೇ ದಿನದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು