ಕ್ರೈಂವೈರಲ್ ನ್ಯೂಸ್ಸಿನಿಮಾ

ಬಳ್ಳಾರಿ ಜೈಲಲ್ಲಿ ಟಿವಿಗಾಗಿ ಮೇಲಾಧಿಕಾರಿಗಳಿಗೆ ಮನವಿ ಮಾಡಿದ ದರ್ಶನ್..! ಚಾರ್ಜ್ ಶೀಟ್ ಸಲ್ಲಿಕೆಯ ಬಗ್ಗೆ ಮಾಹಿತಿ ಕೇಳಿದ ನಟ

238

ನ್ಯೂಸ್‌ ನಾಟೌಟ್‌: ಬಳ್ಳಾರಿ ಜೈಲಿನಲ್ಲಿ ಟಿವಿ ಬೇಕು ಎಂದು ದರ್ಶನ್ ಜೈಲಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟು ದಿನ ಟಿವಿ ಬೇಡ ಎನ್ನುತ್ತಿದ್ದ ಆರೋಪಿ ದರ್ಶನ್‌ಗೆ ಈಗ ಟಿವಿ ಬೇಕು ಎಂದಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆ ದರ್ಶನ್ ಟಿವಿ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಇಂದು(ಸೆ.3) ಬೆಳಗ್ಗೆ ದರ್ಶನ್‌ನನ್ನು ಇರಿಸಿರುವ ಹೈ ಸೆಕ್ಯೂರಿಟಿ ಸೆಲ್ ಬಳಿ ಸಿಬ್ಬಂದಿ ತಿಂಡಿ ಕೊಡಲು ಹೋಗಿದ್ದಾಗ ಚಾರ್ಜ್ ಶೀಟ್ ಸಲ್ಲಿಕೆ ವಿಚಾರದ ಬಗ್ಗೆ ದರ್ಶನ್ ಪದೇ ಪದೇ ಕೇಳಿದ್ದಾರೆ ಎನ್ನಲಾಗಿದೆ. ಮಾಹಿತಿ ಸಿಗದೇ ಇದ್ದಾಗ ಜೈಲು ಸಿಬ್ಬಂದಿ ಬಳಿ ಮಧ್ಯಾಹ್ನದ ಊಟ ಕೊಡಲು ಹೋದಾಗ ಟಿವಿ ಬಗ್ಗೆ ವಿಚಾರಿಸಿದ್ದಾರೆ. ಆಗ ಟಿವಿ ಬೇಕು ಅನ್ನುವುದಾದರೆ ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಎಂದು ಸಿಬ್ಬಂದಿ ಹೇಳಿದರು. ಹೀಗಾಗಿ ಟಿವಿ ಬೇಕು ಎಂದು ದರ್ಶನ್ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜೈಲಿನ ಮ್ಯಾನುವಲ್ ಪ್ರಕಾರ ಕೈದಿಗಳಿಗೆ ಟಿವಿ ಕೊಡುವುದಕ್ಕೆ ಅವಕಾಶ ಇದೆ. ಸದ್ಯ ದರ್ಶನ್ ಸೆಲ್‌ನಲ್ಲಿ ಟಿವಿ ಇಲ್ಲ ಎಂದು ವರದಿ ತಿಳಿಸಿದೆ.

Click

https://newsnotout.com/2024/09/cow-transfer-kannada-news-puc-student-noomore-by-fire/
https://newsnotout.com/2024/09/helicopter-emergency-landing-in-sea-ship-and-airplane/
https://newsnotout.com/2024/09/devi-chamundeshwari-kannada-news-k-news-siddaramayya/
See also  RSS ಮುಖ್ಯಸ್ಥನ ಮೇಲೆ ದಾಳಿಯ ಸುಳಿವು ಸಿಕ್ಕಿದ್ದೇಗೆ..? ಮೋಹನ್ ಭಾಗವತ್ ಮೇಲೆ ದಾಳಿಗೆ ಪ್ಲಾನ್ ಮಾಡಿದ್ಯಾರು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget