ಕ್ರೈಂರಾಜಕೀಯವೈರಲ್ ನ್ಯೂಸ್ಸಿನಿಮಾ

ಬಳ್ಳಾರಿಯ ಜೈಲು ಸಿಬ್ಬಂದಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದರ್ಶನ್‌ ದೂರು ನೀಡಲು ತಯಾರಿ..? ವಕೀಲರ ಜೊತೆ ಮಾತುಕತೆ..!

ನ್ಯೂಸ್ ನಾಟೌಟ್: ಜೈಲಿನಲ್ಲಿರುವ ದರ್ಶನ್‌ ಕೇಳುವ ಸೌಲಭ್ಯಗಳನ್ನು ನೀಡಲಿಲ್ಲ ಎನ್ನುವ ಕಾರಣಕ್ಕೆ ಜೈಲಧಿಕಾರಿಗಳ ವಿರುದ್ಧ ದರ್ಶನ್‌ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲು ವಕೀಲರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಕೇಳಿದ್ದ ಹಲವು ಬೇಡಿಕೆ ಈಡೇರಿಸಲಾಗಿದೆ. ಇದೀಗ ಇನ್ನೂ ಕೆಲವನ್ನು ಜೈಲಧಿಕಾರಿಗಳ ಬಳಿ ಬೇಡಿಕೆ ಇಟ್ಟಿದ್ದಾರೆ. ಈ ಸೌಲಭ್ಯಗಳನ್ನು ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಸೌಲಭ್ಯ ನೀಡದೆ ಜೈಲಧಿಕಾರಿಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ದರ್ಶನ್‌ ಪರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಆರೋಪಿ ದರ್ಶನ್‌ ಕೇಳಿದ್ದ ಎಲ್ಲ ಸೌಲಭ್ಯ ಕೊಟ್ಟರೆ ಇಲಾಖೆ, ಸರ್ಕಾರದಿಂದ ತಲೆದಂಡವಾಗಲಿದೆ. ಈ ನಡುವೆ ಈ ವಾರದಲ್ಲಿ ಅಂದರೆ ಬರುವ ಸೋಮವಾರ ದರ್ಶನ್‌ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Click

https://newsnotout.com/2024/09/bjp-leader-munirathna-again-arrest-due-to-private-video-case-kannada-news/
https://newsnotout.com/2024/09/hdk-kannada-news-nagamangala-issue-he-will-try-to-release-accused-of-that-conflict/
https://newsnotout.com/2024/09/ganeshan-chaturti-incident-similer-to-nagamangala-kannada-news/

Related posts

ಬೆಂಗಳೂರಿನಲ್ಲಿ ವಿಚಿತ್ರ ದರೋಡೆ ದಂಧೆ, ರಾತ್ರಿ ವೇಳೆ ಒಂಟಿ ವಾಹನ ಚಾಲಕರೇ ಇವರ ಟಾರ್ಗೆಟ್! – ವಿಡಿಯೋ ನೋಡಿ

ವ್ಯಾಪಾರ ಸಮೃದ್ಧಿಗೆ ಸಹಕಾರ, ಸರಕಾರಿ ಕಟ್ಟಡಗಳ ನವೀಕರಣ

ಬಸ್‌ ಸೀಟ್ ವಿಚಾರಕ್ಕೆ ವೃದ್ಧನಿಗೆ ಹೊಡೆದ ಮಹಿಳೆಯರು..! ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದ ಪೊಲೀಸರು ಮಾಡಿದ್ದೇನು?