ನ್ಯೂಸ್ ನಾಟೌಟ್:ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಮತ್ತೆ ಹಳ್ಳಿ ಹುಡುಗಿ ಗೆಟಪ್ ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.ನೀನಾಸಂ ಸತೀಶ್ ನಟನೆಯ “ದ ರೈಸ್ ಆಫ್ ಅಶೋಕ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ವಿಭಿನ್ನ ಮೂವಿಯಲ್ಲಿ ಸತೀಶ್ ರಗಡ್ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈಗ ಚಿತ್ರತಂಡ ಚಿತ್ರದ ನಾಯಕಿ ಯಾರೆಂಬ ಗುಟ್ಟುಬಿಟ್ಟುಕೊಟ್ಟಿದೆ.ಚಿತ್ರಕ್ಕೆ “ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿದ್ದಾರೆ.ಅಂಬಿಕಾ ಎಂಬ ಪಾತ್ರ ನಿರ್ವಹಿಸುತ್ತಿರುವ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಹರಿಬಿಟ್ಟಿದೆ ಚಿತ್ರತಂಡ.
ವಿನೋದ್ ಧೋಂಡಾಳೆ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಇದೀಗ ಸಂಕಲನಕಾರ ಮನು ಶೇಡ್ಗಾರ್ ಮುಂದುವರಿಸಿದ್ದಾರೆ. ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿ ಮಗ್ನವಾಗಿದೆ ತಂಡ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ತಾರಾಗಣ ಹಾಗೂ ತಾಂತ್ರಿಕ ವಿಷಯದಲ್ಲಿ ಸದ್ದು ಮಾಡಲು ಸಜ್ಜಾಗಿದೆ ಚಿತ್ರತಂಡ. ಚಿತ್ರದಲ್ಲಿ ಸತೀಶ್ ಜೊತೆಗೆ ಬಿ.ಸುರೇಶ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯ, ಯಶ್ ಶೆಟ್ಟಿ ಹಾಗೂ “ವಿಕ್ರಂ ವೇದ’ ಖ್ಯಾತಿಯ ಹರೀಶ್ ಪೇರಾಡಿ ತಾರಾಗಣದಲ್ಲಿದ್ದಾರೆ.ನಂಜನಗೂಡು, ಶ್ರೀರಂಗಪಟ್ಟಣ, ಚನ್ನಪಟ್ಟಣ, ಚಾಮರಾಜ ನಗರ, ದೊಡ್ಡ ಬಳ್ಳಾಪುರ ಗುಂಡ್ಲುಪೇಟೆ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಲವಿತ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.