ಕರಾವಳಿಕ್ರೀಡೆ/ಸಿನಿಮಾ

ನನ್ನ ಮದುವೆ ಶೀಘ್ರದಲ್ಲೇ ಇದೆ,ರಶ್ಮಿಕಾ ಜತೆ ಇನ್ನೂ ಸಂಪರ್ಕದಲ್ಲಿದ್ದೇನೆ-ನಟ ರಕ್ಷಿತ್ ಶೆಟ್ಟಿ;ಸಿಂಪಲ್ ಸ್ಟಾರ್ ಮದುವೆಯಾಗುತ್ತಿರೋ ಆ ‘ಲಕ್ಕಿ ಗರ್ಲ್’ ಯಾರು ಗೊತ್ತಾ?

ನ್ಯೂಸ್ ನಾಟೌಟ್ : ನಟಿ ರಶ್ಮಿಕಾ ಮಂದಣ್ಣ ಅವರ ಮಾಜಿ ಗೆಳೆಯ ಹಾಗೂ ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ಎಂದೇ ಖ್ಯಾತಿ ಪಡೆದ ನಟ ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾ ಯಾವುದು ಅನ್ನೋದಕ್ಕಿಂತಲೂ ಅವರ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ಭಾರಿ ಕುತೂಹಲದಲ್ಲಿದಲ್ಲಿದ್ದಾರೆ.ನಟ ರಕ್ಷಿತ್ ಶೆಟ್ಟಿ ಎಲ್ಲಿ ಹೋದ್ರು ,ಬಂದ್ರೂ ಅವರಿಗೊಂದು ಇದೀಗ ಮತ್ತೊಂದು ದೊಡ್ಡ ಪ್ರಶ್ನೆ ಎದುರಾಗುತ್ತದೆಯಂತೆ ಅದೇನದು ಗೊತ್ತಾ.. ಇಲ್ಲಿ ಓದಿ..

ಸದ್ಯ ಅವರ ಇತ್ತೀಚಿನ ಕನ್ನಡ ಚಿತ್ರ ‘ಸಪ್ತ ಸಾಗರ ದಾಚೆ ಎಲ್ಲೋ’ ಜನರ ಮನಗೆದ್ದಿದೆ. ಈ ಚಿತ್ರವು ಸಪ್ತ ಸಾಗರ ದಾಟಲು ಎಂಬ ಹೆಸರಿನೊಂದಿಗೆ ತೆಲುಗಿನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗೋದಕ್ಕೂ ಸಿದ್ಧವಾಗಿದೆ. ಈ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಕ್ಷಿತ್ ಶೆಟ್ಟಿ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಮದುವೆ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. 

ಅಂದ ಹಾಗೆ ನಟ ರಕ್ಷಿತ್ ಶೆಟ್ಟಿಗೆ ಎದುರಾಗುತ್ತಿರುವ ಮತ್ತೊಂದು ಪ್ರಶ್ನೆ ಎಂದರೆ ಅದು ‘ರಶ್ಮಿಕಾ ಮಂದಣ್ಣ’ ಅವರ ಕುರಿತು.ಈ ಬಾರಿಯೂ ಅದೇ ಪ್ರಶ್ನೆ ಮತ್ತೆ ಎದುರಾಗಿದೆ.ಅದಕ್ಕೆ ಕಾರಣವಾಗಿದ್ದು ಕೂಡ “ಸಪ್ತಸಾಗರದಾಚೆ ಎಲ್ಲೋ’ ಚಿತ್ರ. ಈ ಚಿತ್ರವನ್ನು ತೆಲುಗಿನಲ್ಲಿ “ಸಪ್ತ ಸಾಗರಲು ದಾಟಿ’ ಎಂಬ ಟೈಟಲ್‌ನಡಿ ಸೆ.22ಕ್ಕೆ ಬಿಡುಗಡೆ ಮಾಡಿದೆ.

ಈ ಸಂದರ್ಭದಲ್ಲಿ ಚಿತ್ರದ ಪ್ರಮೋಶನ್‌ನಲ್ಲಿ ಭಾಗಿಯಾಗಿದ್ದ ರಕ್ಷಿತ್‌ ಶೆಟ್ಟಿ ಅವರಿಗೆ ಯೂಟ್ಯೂಬರ್‌ ಒಬ್ಬರು ಪ್ರಶ್ನೆಯೊಂದನ್ನು ಕೇಳಿದ್ದಾರೆ. “ನೀವು ರಶ್ಮಿಕಾ ಜೊತೆ ಸಂಪರ್ಕದಲ್ಲಿದ್ದೀರಾ’ ಎಂದು.ಇದಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್‌ ತುಂಬಾ ಕೂಲ್‌ ಆಗಿಯೇ ಉತ್ತರಿಸಿದ್ದಾರೆ. “ಹೌದು ಸಂಪರ್ಕದಲ್ಲಿದ್ದೇವೆ. ಆಕೆಗೆ ದೊಡ್ಡ ದೊಡ್ಡ ಕನಸುಗಳಿದ್ದವು. ಆಕೆಯ ಸಾಧನೆಗೆ ಭೇಷ್‌’ ಎಂದು ಪ್ರಶಂಸಿದ್ದಾರೆ. ಈ ವಿಡಿಯೋ ಈಗ ಬಾರಿ ವೈರಲ್‌ ಆಗಿದೆ.

ಮತ್ತೊಬ್ಬರು ನಡೆಸಿರುವ ಸಂದರ್ಶನವೊಂದರಲ್ಲಿ ರಕ್ಷಿತ್‌ ಶೆಟ್ಟಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ, ‘ಶೀಘ್ರದಲ್ಲೇ’ ಎಂದು ಉತ್ತರಿಸಿದ್ದಾರೆ. ಸದ್ಯದಲ್ಲೇ  ಹುಡುಗಿಯ ವಿವರವೂ ಹೊರಬೀಳಲಿದೆ ಎಂದು ಕುತೂಹಲಕಾರಿಯಾಗಿ ಉತ್ತರಿಸಿದ್ದಾರೆ.ಆದರೆ ಹುಡಗಿ ಯಾರು ಎಂಬುದರ ಬಗ್ಗೆ ಎಲ್ಲೂ ಮಾಹಿತಿಯಿಲ್ಲ.

ರಕ್ಷಿತ್ ಶೆಟ್ಟಿ ಈ ಹಿಂದೆ ರಶ್ಮಿಕಾ ಮಂದಣ್ಣ ಅವರನ್ನು ಪ್ರೀತಿಸಿದ್ದು ಗೊತ್ತೇ ಇದೆ. ಇವರಿಬ್ಬರ ಪ್ರೇಮವು ವಿವಾಹದವರೆಗೂ ಹೋಯಿತು. ಅವರ ನಿಶ್ಚಿತಾರ್ಥವು ಅನೇಕ ಸೆಲೆಬ್ರಿಟಿಗಳ ನಡುವೆ ಅದ್ಧೂರಿಯಾಗಿ ನಡೆಯಿತು. ಆದರೆ ಕೆಲದಿನಗಳ ಬಳಿಕ ಅವರ ನಿಶ್ಚಿತಾರ್ಥ ಮುರಿದುಬಿದ್ದಿತು. 

Related posts

ಇಂದಿನಿಂದ ಮಂಗಳೂರು ದಸರಾ, ಭರ್ಜರಿ ಕಾರ್ಯಕ್ರಮ ಆಯೋಜನೆ

ಟಿ20 ವಿಶ್ವಕಪ್‌: ಅಫ್ಘಾನಿಸ್ತಾನ ಗೆಲುವಿಗಾಗಿ ಕೋಟ್ಯಂತರ ಭಾರತೀಯರ ಪ್ರಾರ್ಥನೆ..! ಏನಿದು ಅಚ್ಚರಿ?

ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಹಿನ್ನೆಲೆ, ಅರಂತೋಡು ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ