ನ್ಯೂಸ್ ನಾಟೌಟ್: ಬಹುನಿರೀಕ್ಷಿತ ಕಾಂತಾರ 1 ಸಿನೆಮಾ ಬಾರಿ ಸದ್ದು ಮಾಡ್ತಿದೆ. ಸಿನಿ ಅಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದ್ದು ಯಾವಾಗ ಈ ಚಿತ್ರ ರಿಲೀಸ್ ಆಗಬಹುದು ಎಂದು ಕಾದು ಕುಳಿತಿದ್ದಾರೆ.ರಿಷಭ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಈ ಚಿತ್ರ ಇದೇ ವರ್ಷ ಅಕ್ಟೋಬರ್ 2ರಂದು ಬಿಡುಗಡೆಗೊಳ್ಳುವುದಾಗಿ ಚಿತ್ರತಂಡ ಸ್ಪಷ್ಟನೆ ನೀಡಿದೆ.
We’re right on track, and everything is progressing as planned.#KantaraChapter1 will release in theatres worldwide on October 2, 2025.
Trust us, it’ll be worth the wait.
We kindly urge everyone to avoid speculation and refrain from sharing unverified updates.
ಕಾಂತಾರದ ದರ್ಶನ…
— Kantara – A Legend (@KantaraFilm) May 22, 2025
ಅಕ್ಟೋಬರ್ ೨ ರಂದು ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ಹೇಳಿ ಕೊಂಡರೂ ಚಿತ್ರ ರಿಲೀಸ್ ಬಗ್ಗೆ ಹಾಗೂ ಚಿತ್ರತಂಡಕ್ಕೆ ಎದುರಾದ ಕೆಲವು ಸಮಸ್ಯೆಗಳಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಲಿದೆ ಎಂಬ ವದಂತಿಗಳು ಹರಡಿದ್ದವು.ಅದಕ್ಕೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಕಾಂತಾರ 1 ಚಿತ್ರದ ಕೆಲಸಗಳೆಲ್ಲವೂ ಅಂದುಕೊಂಡಂತೆ ನಡೆಯುತ್ತಿವೆ. ನಮ್ಮ ಮೇಲೆ ಭರವಸೆ ಇಡಿ. ಯಾವುದೇ ವದಂತಿಗೆ ಕಿವಿಗೊಡಬೇಡಿ. ಸಿನೆಮಾವು ನಿಗದಿತ ದಿನಾಂಕದಂದೇ ಬಿಡುಗಡೆ ಆಗಲಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.
ಇತ್ತೀಚೆಗೆ ಕಾಂತಾರ 1 ಚಿತ್ರದಲ್ಲಿ ನಟಿಸಿದ್ದ ನಟ, ಕಾಮಿಡಿ ಕಿಲಾಡಿಗಳು ಸೀಸನ್ ೩ ವಿನ್ನರ್ ರಾಕೇಶ್ ಪೂಜಾರಿ ಹಾಗೂ ಎಂ.ಎಫ್. ಕಪಿಲ್ ನಿಧನ ಹೊಂದಿದ್ದರು. ಅದಕ್ಕೂ ಮೊದಲು ಚಿತ್ರದ ಸಹ ಕಲಾವಿದರು ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಈ ವಿಘ್ನಗಳು ಎದುರಾದ ಬಳಿಕ ಚಿತ್ರ ರಿಲೀಸ್ ಬಗ್ಗೆ ವದಂತಿಗಳು ಹಬ್ಬಿದ್ದವು. ಈ ಎಲ್ಲಾ ವಿಘ್ನಗಳ ನಿವಾರಣೆಗೆ ರಿಷಭ್ ಶೆಟ್ಟಿ ದೈವದ ಮೊರೆ ಹೋಗಿ, ವಿಶೇಷ ಪೂಜೆಯನ್ನೂ ಸಲ್ಲಿಸಿದ್ದರು. ಸದ್ಯ ಚಿತ್ರತಂಡ ಸ್ಪಷ್ಟನೆ ನೀಡಿ ಗೊಂದಲಗಳಿಗೆ ತೆರೆ ಎಳೆದಿದೆ.