Latest

ʼಡೆವಿಲ್ʼ ಚಿತ್ರದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ದರ್ಶನ್!ಚಿತ್ರೀಕರಣದ ಸಂದರ್ಭದಲ್ಲಿನ  ಫೋಟೋ ಲೀಕ್!

609

ನ್ಯೂಸ್‌ ನಾಟೌಟ್: ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಡೆವಿಲ್ ಶೂಟಿಂಗ್ ಮುಕ್ತಾಯ ಹಂತ ತಲುಪಿದೆ.ಈ ಚಿತ್ರದ ಮೇಲೆ ಅವರ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದು ಚಿತ್ರ ಯಾವಾಗ ತೆರೆ ಮೇಲೆ ಬರುತ್ತೆ ಅನ್ನೋದನ್ನ ಕಾಯುತ್ತಿದ್ದಾರೆ.

ಲಾಂಗ್‌ ಗ್ಯಾಪ್‌ ಬಳಿಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿರುವ ದರ್ಶನ್ ಅವರು ʼಡೆವಿಲ್ʼ (Devil Movie) ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಅಬ್ಬರಿಸಲಿದ್ದಾರೆ. ಈ ಚಿತ್ರ ಶೂಟಿಂಗ್ ಶುರುವಾಗುತ್ತಿದ್ದಂತೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ ದರ್ಶನ್ ಅವರು ರೇಣುಕಾ ಸ್ವಾಮಿ (Renuka swamy) ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದರು.ಬಳಿಕ ಜಾಮೀನು ಪಡೆದು ಆಚೆ ಬಂದರು. ಕೆಲ ದಿನಗಳ ಬಳಿಕ ದರ್ಶನ್ ʼಡೆವಿಲ್ʼ ಚಿತ್ರೀಕರಣದಲ್ಲಿ ಭಾಗಿಯಾಗಿ ಚಿತ್ರೀಕರಣವನ್ನು ಮುಗಿಸಿದ್ದಾರೆ.

ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿ, ರಾಜಸ್ಥಾನದಲ್ಲಿ ಚಿತ್ರೀಕರಣ ಮುಗಿಸಿದ್ದು, ಸದ್ಯ ಬೆಂಗಳೂರಿನಲ್ಲಿ  ಚಿತ್ರದ ನಾಲ್ಕನೇ ಹಂತದ ಹಾಗೂ ಅಂತಿಮ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ.ʼಡೆವಿಲ್ʼ ಟೀಸರ್ ನೋಡಿ ಇದೊಂದು ಡಾನ್ ಒಬ್ಬನ ಕಥೆಯನ್ನೊಳಗೊಂಡ ಚಿತ್ರವೆನ್ನುವ ಮಾತುಗಳು ಗಾಂಧಿ ನಗರದಲ್ಲಿ ಹರಿದಾಡಿತ್ತು. ಇದೀಗ ಚಿತ್ರೀಕರಣದ ಸಂದರ್ಭದಲ್ಲಿನ  ಫೋಟೋವೊಂದು ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಕಟೌಟ್​ನಲ್ಲಿ ದರ್ಶನ್ ಕೈಮುಗಿಯುತ್ತಿರುವ ಫೋಟೋ ಲೀಕ್ ಆಗಿರುವುದನ್ನು ನೋಡಿ ಇದರಲ್ಲಿ ದರ್ಶನ್ ಫೋಟೋ ಕೆಳಗೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಷ್ ರಾಜಶೇಖರ್ ಎಂದು ಬರೆದಿದೆ. ಇದಲ್ಲದೆ ಕರುನಾಡ ಪ್ರಜಾ ಪಕ್ಷ ಎಂದು ಫೋಟೋ ಮೇಲ್ಗಡೆ ಬರೆಯಲಾಗಿದೆ.ಈ ಫೋಟೋ ನೋಡಿ ʼಡೆವಿಲ್ʼನಲ್ಲಿ ರಾಜಕೀಯ ಅಂಶವೂ ಇರಲಿದೆ. ದರ್ಶನ್ ರಾಜಕೀಯ ಮುಖಂಡನಾಗಿಯೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ.

 

See also  ಮೂರೂವರೆ ಗಂಟೆಯಲ್ಲಿ ಭಾರತದ 4 ರಾಜ್ಯ, 24 ನಗರಗಳಿಗೆ ಪಾಕ್ ದಾಳಿ..! ಭಾರತೀಯ ಸೇನೆಯಿಂದ ಅಧಿಕೃತ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget