ದೇಶ-ಪ್ರಪಂಚರಾಜಕೀಯ

ಬಾಲರಾಮನ ಪ್ರತಿಷ್ಠೆಯ ನೇರ ಪ್ರಸಾರ ಬ್ಯಾನ್ ಮಾಡಿದೆಯಾ ತಮಿಳುನಾಡು ಸರ್ಕಾರ​? ಈ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು..?

ನ್ಯೂಸ್ ನಾಟೌಟ್ : ದೇಶದ ಕೋಟ್ಯಾಂತರ ಜನರು ಶ್ರೀರಾಮನ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ನಾಳೆ (ಜನವರಿ 22ರಂದು) ಅಯೋಧ್ಯೆಯಲ್ಲಿ ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದ ನೇರ ಪ್ರಸಾರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ ಎಂದು ಆರೋಪಿಸಲಾಗಿದ್ದು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ರಾಜ್ಯ ಸರ್ಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ಶ್ರೀ ರಾಮನ 200ಕ್ಕೂ ಹೆಚ್ಚು ದೇವಾಲಯಗಳಿವೆ. ಸರ್ಕಾರದಿಂದ ನಿರ್ವಹಿಸುವ ದೇವಾಲಯಗಳಿಗೆ ಜನವರಿ 22ರಂದು ಶ್ರೀ ರಾಮನ ಹೆಸರಿನಲ್ಲಿ ವಿಶೇಷ ಪೂಜೆ , ಭಜನೆ, ಪ್ರಸಾದ, ಅನ್ನದಾನದಿಂದ ಮಾಡದದಂತೆ ಸರ್ಕಾರ ಸೂಚಿಸಿದೆ ಎಂದು ಸೀತಾರಾಮನ್ ಆರೋಪ ಮಾಡಿದ್ದಾರೆ.

ಖಾಸಗಿ ಒಡೆತನದ ದೇವಾಲಯಗಳನ್ನು ಕಾರ್ಯಕ್ರಮಗಳನ್ನು ಆಯೋಜಿಸದಂತೆ ಪೊಲೀಸರು ತಡೆಯುತ್ತಿದ್ದಾರೆ. ಅವರು ಪೆಂಡಾಲ್ ಗಳನ್ನು ಹರಿದುಹಾಕುವುದಾಗಿ ಸಂಘಟಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೂ ವಿರೋಧಿ, ದ್ವೇಷಪೂರಿತ ಕ್ರಮವನ್ನು ಬಲವಾಗಿ ಖಂಡಿಸುತ್ತೇನೆ ಎಂದು ನಿರ್ಮಲಾ ಅವರು ಹೇಳಿಕೊಂಡಿದ್ದಾರೆ .

https://newsnotout.com/2024/01/school-college-leave-dk-rama/

Related posts

ಗರ್ಭಿಣಿ ಅಂತ ತವರು ಮನೆಗೆ ಹೊರಟ್ಲು..ಬೇರೊಬ್ಬನನ್ನು ವಿವಾಹವಾದ್ಲು..!ಹಾಗಾದರೆ ಮಗು ಎಲ್ಲಿ?ಶಾಕ್‌ಗೊಳಗಾದ ಗಂಡ..!

ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ ಬೊಮ್ಮಾಯಿ..! ಈ ಬಗ್ಗೆ ವಕೀಲ ಜಗದೀಶ್ ಹೇಳಿದ್ದೇನು..? ಇಲ್ಲಿದೆ ವಿಡಿಯೋ

ತನ್ನದೇ ಪಕ್ಷದ ಶಾಸಕನನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿದ್ದೇಕೆ ಬಿಜೆಪಿ ಸಂಸದೆ..? ಆ ಹುಡುಗಿ ಬಂದು ಸಂಸದೆಯ ಬಳಿ ಹೇಳಿದ್ದೇನು..?