ವೈರಲ್ ನ್ಯೂಸ್

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡ ಮಹಿಳೆ..! ವೈದ್ಯರು ನೀಡಿದ್ದ ದಿನಾಂಕಕ್ಕೂ ಮೊದಲೇ ಹೆರಿಗೆ!

ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಸಮಯ ಹೊಂದಿಕೆಯಾಗುವಂತೆ ರಾಷ್ಟ್ರವ್ಯಾಪಿ ಅನೇಕರು ‘ಮುಹೂರ್ತದ ಹೆರಿಗೆ’ಯನ್ನು ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿವೆ.

ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವೈದ್ಯರಲ್ಲಿ ಮನವಿ ಮಾಡಿಕೊಂಡು ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಈ ಮೊದಲು ಹೆರಿಗೆ ದಿನಾಂಕವನ್ನು 23ಕ್ಕೆ ನೀಡಲಾಗಿತ್ತು. ಬಳಿಕ, ಮಹಿಳೆ ಮನವಿ ಮೇರೆಗೆ ರಾಮನ ಪ್ರಾಣ ಪ್ರತಿಷ್ಠಾಪನೆಯ ಶುಭ ಮುೂರ್ತದಲ್ಲಿ ಒಂದು ದಿನ ಮೊದಲೇ ಹೆರಿಗೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಮಹಿಳೆಯು ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದು, ರಾಮ ಭಕ್ತೆಯಾಗಿದ್ದಾರೆ ಎನ್ನಲಾಗಿದೆ.

ಥಾಣೆಯ ನೌಪದಾ ನಿವಾಸಿಯಾಗಿರುವ ಸಮೃದ್ಧಿ ಬಾಮನೆ ಎಂಬ ಮಹಿಳೆ ಐವಿಎಫ್ ಚಿಕಿತ್ಸೆ ಮೂಲಕ ಗರ್ಭ ಧರಿಸಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಮಗುವಿನ ಜನನವಾಗಿದ್ದು, ಮಗು ಮತ್ತು ತಾಯಿ ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

https://newsnotout.com/2024/01/11-days-practice-pm/

Related posts

5 ವರ್ಷದ ಮಗುವಿಗೆ ಹೃದಯಾಘಾತ..! ಮನೆಯವರು ಮರಣೋತ್ತರ ಪರೀಕ್ಷೆಗೆ ಒಪ್ಪಲಿಲ್ಲವೇಕೆ..?

ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ಗೆ ಗುದ್ದಿದ ಬೈಕ್..! ಬೈಕ್ ಸವಾರ ಸ್ಥಳದಲ್ಲೇ ಸಾವು..!

ಬಿಜೆಪಿ ಅಭ್ಯರ್ಥಿ ಯದುವೀರ್ ರೇಡಿಯೋ ಕಾರ್ಯಕ್ರಮ, ಚುನಾವಣಾ ಆಯೋಗಕ್ಕೆ ದೂರು