Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಬಕ್ರೀದ್ ಹಬ್ಬಕ್ಕೆ ಈ ಮುಸ್ಲಿಂ ರಾಷ್ಟ್ರದಲ್ಲಿ ಕುರಿ ಬಲಿ ನಿಷೇಧ..! ಇಲ್ಲಿದೆ ಕಾರಣ

577

ನ್ಯೂಸ್‌ ನಾಟೌಟ್ : ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಕುರಿ ಬಲಿ ಬೇಡ ಎಂದು ಮೊರಾಕೊ (Moracco) ರಾಜ ಅಲ್ಲಿನ ಜನರಿಗೆ ಮನವಿ ಮಾಡಿದ್ದಾರೆ. ಮೊರಾಕೊ ಉತ್ತರ ಆಫ್ರಿಕಾದ (North Africa) ಒಂದು ದೇಶ. ಅದರಲ್ಲೂ ಮುಸ್ಲಿಮರು ಬಹುಸಂಖ್ಯಾತರಾಗಿರೋ ದೇಶವಾಗಿದೆ. ಆದರೆ ಈಗ ಅಲ್ಲಿ ಬರಗಾಲ ತಾಂಡವವಾಡ್ತಿದ್ದು, ಇದರಿಂದಾಗಿ ದೇಶದಲ್ಲಿ ಕುರಿಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಈ ವರ್ಷದ ಬಕ್ರೀದ್ ಹಬ್ಬಕ್ಕೆ ಕುರಿ ಬಲಿ ಕೊಡುವುದರಿಂದ ದೂರವಿರಬೇಕೆಂದು ಮೊರಾಕೊ ರಾಜ ಆ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಿರಂತರ ಬರಗಾಲ ಎದುರಿಸುತ್ತಿರುವುದರಿಂದ ವಿಶೇಷವಾಗಿ ಉತ್ತರ ಆಫ್ರಿಕಾದ ಅನೇಕ ಭಾಗಗಳಲ್ಲಿ ಕುರಿ ಬಲಿ ಬೇಡ ಎಂದು ರಾಜ ಕೇಳಿಕೊಂಡಿದ್ದಾರೆ. ಆದರೆ ಕಳೆದ 9 ವರ್ಷಗಳಿಂದ ಬಂದ ಬರಗಾಲದಿಂದಾಗಿ ಮೊರಾಕೊದಲ್ಲಿ ಕುರಿ, ಜಾನುವಾರುಗಳ ಸಂಖ್ಯೆ 38% ಕಡಿಮೆಯಾಗಿದೆ. “ನಮ್ಮ ದೇಶ ಈಗ ಬರಗಾಲ ಮತ್ತು ಆರ್ಥಿಕ ಸಂಕಷ್ಟ ಎರಡನ್ನೂ ಎದುರಿಸುತ್ತಿದೆ. ಇದರಿಂದ ಜಾನುವಾರುಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ” ಎಂದು ರಾಜ ಮೊಹಮ್ಮದ್ ಹೇಳಿದ್ದಾರೆ.

“ಈ ಧಾರ್ಮಿಕ ವಿಧಿಯನ್ನ ಉತ್ತಮ ಪರಿಸ್ಥಿತಿಗಳಲ್ಲಿ ಪೂರೈಸಲು ನಿಮಗೆ ಅನುವು ಮಾಡಿಕೊಡುವುದರ ಜೊತೆಗೆ ನಮ್ಮ ದೇಶ ಎದುರಿಸುತ್ತಿರುವ ಹವಾಮಾನ ಮತ್ತು ಆರ್ಥಿಕ ಸವಾಲುಗಳನ್ನು ಪರಿಗಣಿಸಬೇಕಿದೆ. ಇದರಿಂದಾಗಿ ಜಾನುವಾರುಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವಾಗಿರುವುದರಿಂದ ಕುರಿ ಬಲಿ ಬೇಡ ಎಂದು ಮನವಿ ಮಾಡ್ತಿದ್ದೇವೆ” ಎಂದು ರಾಜನ ಪರವಾಗಿ ಧಾರ್ಮಿಕ ವ್ಯವಹಾರಗಳ ಸಚಿವ ಅಹ್ಮದ್ ತೌಫಿಕ್ ತಿಳಿಸಿದ್ದಾರೆ. “ಈ ಕಷ್ಟದ ಸಮಯದಲ್ಲಿ ಕುರಿ ಬಲಿ ಕೊಡುವುದರಿಂದ ಜನರಿಗೆ, ಅದರಲ್ಲೂ ಬಡವರಿಗೆ ತೊಂದರೆಯಾಗುತ್ತದೆ” ಎಂದು ಹೇಳಿದ್ದಾರೆ.

See also  ಮಂಗಳೂರು: 8 ಮಂದಿ ಸ್ನೇಹಿತರ ಜೊತೆ ಬಂದ ಯುವಕ ಸಮುದ್ರಪಾಲು..! ತನಿಖೆ ನಡೆಸುತ್ತಿರುವ ಸುರತ್ಕಲ್ ಪೊಲೀಸರು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget