ಕರಾವಳಿ

ಮಂಗಳೂರು: ಎಡಪದವು ಗ್ರಾಮದಿಂದ ಗೋವುಗಳನ್ನು ಕಳವುಗೈದ ಇಬ್ಬರ ಬಂಧನ, ಕಾರು ವಶ

ನ್ಯೂಸ್‌ ನಾಟೌಟ್‌: ಮಂಗಳೂರು ಹೊರವಲಯದ ಬಜಪೆ ಠಾಣಾ ವ್ಯಾಪ್ತಿಯ ಬಡಗ ಎಡಪದವು ಗ್ರಾಮದ ದಡ್ಡಿ ಎಂಬಲ್ಲಿ ಆ. 14ರಂದು ರಾತ್ರಿ ಮೂರು ದನಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ದನಕಳ್ಳರನ್ನು ಶನಿವಾರ (ಆ. 19) ಬಂಧಿಸಲಾಗಿದೆ.

ಬಂಧಿತರನ್ನು ಉಳ್ಳಾಲ ತಾಲೂಕಿನ ಇರ್ಫಾನ್‌ (30) ಮತ್ತು ಬಂಟ್ವಾಳ ತಾಲೂಕಿನ ಮೊಹಮ್ಮದ್‌ ಆರಿಫ್ (32) ಎಂದು ಗುರುತಿಸಲಾಗಿದೆ. ಅಲ್ಲದೇ ಕೃತ್ಯಕ್ಕೆ ಬಳಸಿದ 5 ಲಕ್ಷ ರೂ. ಮೌಲ್ಯದ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಬಜಪೆ ಠಾಣಾ ವ್ಯಾಪ್ತಿಯ ಬಡಗ ಎಡಪದವು ಗ್ರಾಮದ ದಡ್ಡಿ ಎಂಬಲ್ಲಿ ಆ. 14ರಂದು ರಾತ್ರಿ ಮೂರು ದನಗಳನ್ನು ಗೋಕಳ್ಳರು ಕಳವು ಮಾಡಿದ್ದರು. ಈ ಬಗ್ಗೆ ಬಜಪೆ ಠಾಣೆಯಲ್ಲಿ ಗೋಹತ್ಯಾ ನಿಷೇಧ ಕಾಯ್ದೆಯಂತೆ ದೂರು ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಶನಿವಾರ ಇಬ್ಬರು ಗೋಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts

ಅಡ್ಕಾರು ಸಮೀಪ ಕಾರುಗಳ ನಡುವೆ ಭೀಕರ ಅಪಘಾತ, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಕೋಟಿ-ಚೆನ್ನಯ್ಯ ನೇಮೋತ್ಸವದ ‘ಕೋಟಿ’ ಪಾತ್ರಿ ನಿಗೂಢ ಸಾವಿನ ಹಿಂದಿನ ರಹಸ್ಯವೇನು..? ಅಡ್ಡೂರು ಸೇತುವೆ ಬಳಿ ಆಟೋ ಸ್ಟಾರ್ಟ್ ಆಗಿಯೇ ನಿಂತುಕೊಂಡಿದ್ದೇಕೆ..?

ಕಾರ್ಕಳ:ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಕುಕ್ಕುಂದೂರು ಭೇಟಿ