Uncategorized

ಎರಡು ಸಲ ‘ಕಾಂತಾರ’ ಸಿನಿಮಾ ನೋಡಿದ ಬಾಹುಬಲಿ ಪ್ರಭಾಸ್ ಹೇಳಿದ್ದೇನು?

ನ್ಯೂಸ್ ನಾಟೌಟ್ : ಕನ್ನಡಿಗರು ಮೆಚ್ಚುವಂತಹ ಸಿನಿಮಾ ಮಾಡಿ ತೋರಿಸಿದ ರಿಷಭ್ ಶೆಟ್ಟಿ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ದೇಶ-ವಿದೇಶದಲ್ಲಿ ಸಿನಿಮಾ ಭರ್ಜರಿಯಾಗಿ ಓಡುತ್ತಿದೆ. ಈ ನಡುವೆ  ನಮ್ಮವರೇ ಅನಿಸಿಕೊಂಡ ಕೆಲವರು ಸಿನಿಮಾದ ಕಥೆಯ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈ ಟೀಕಾಕಾರಿಗೆ ಜನರೇ ಈಗ ಚೆನ್ನಾಗಿ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಾಹುಬಲಿ ಸಿನಿಮಾದ ಖ್ಯಾತಿಯ ನಟ ಪ್ರಭಾಸ್ ಕಾಂತಾರ ಸಿನಿಮಾ ನೋಡಿ ಫುಲ್ ಖುಷ್ ಆಗಿದ್ದಾರೆ. ಒಂದಲ್ಲ ಬರೋಬ್ಬರಿ ಎರಡು ಸಲ ಕಾಂತಾರ ಸಿನಿಮಾವನ್ನು ನೋಡಿದ್ದಾರೆ ಪ್ರಭಾಸ್.

ಹೌದು. ಕನ್ನಡ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಏಕೆ ಕ್ಲಿಕ್ ಆಯಿತು ಅನ್ನುವುದನ್ನು ಸ್ವತಃ ಪ್ರಭಾಸ್ ಈಗ ಅರಿತುಕೊಂಡಿದ್ದಾರೆ. ಸಿನಿಮಾವನ್ನು ನೋಡಿ ಪ್ರತಿಕ್ರಿಯೆ ನೀಡಿದ ಪ್ರಭಾಸ್ ಇದೊಂದು ಅದ್ಭುತ ಸಿನಿಮಾ. ಕ್ಲೈ ಮ್ಯಾಕ್ಸ್‌ ರೋಮಾಂಚನವನ್ನುಂಟು ಮಾಡುತ್ತದೆ. ಇದೇ ಕಾರಣದಿಂದ ಎರಡು ಸಲ ಸಿನಿಮಾವನ್ನು ನೋಡಿದ್ದೇನೆ. ಒಳ್ಳೆಯ ಕಥೆಯನ್ನು ಸಿನಿಮಾ ಹೊಂದಿದೆ. ಪ್ರತಿಯೊಬ್ಬರು ಸಿನಿಮಾಗಳನ್ನು ಚಿತ್ರ ಮಂದಿರಗಳಲ್ಲಿ ನೋಡಲೇಬೇಕು ಎಂದು ಪ್ರಭಾಸ್ ಹೇಳಿದ್ದಾರೆ. ಪ್ರಭಾಸ್ ಮಾತ್ರವಲ್ಲ ದೇಶದ ಸಿನಿಮಾ ಇಂಡೆಸ್ಟ್ರಿಯ ಹಲವಾರು ಮಂದಿ ಕಾಂತಾರ ಸಿನಿಮಾದ ಯಶಸ್ಸು ಕಂಡು ಬೆರಗಾಗಿದ್ದಾರೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಮಾರು ೧೨೦ ಕೋಟಿಗೂ ಅಧಿಕ ಹಣವನ್ನು ಕಾಂತಾರ ಬಾಚಿಕೊಂಡಿರುವುದು ವಿಶೇಷವಾಗಿದೆ.

Related posts

ಮದ್ಯಪಾನ ಸೇವಿಸಿ ಯದ್ವಾ ತದ್ವಾ ಜೀಪು ಓಡಿಸಿ ಕುಡುಕನ ಅವಾಂತರ

ಸುಳ್ಯ: ಕೃಷಿ ಮೇಳದಲ್ಲಿ ಮೇಳೈಸಿದ ಹಣ್ಣುಗಳು, ಗ್ರಾಹಕರ ಕಣ್ಮನ ಸೆಳೆದ ಹಲಸು, ರಂಬೂಟನ್, ಮಾವು

ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಮಾಜಿ ಸಚಿವ ಎಸ್.ಅಂಗಾರ