ಬೆಂಗಳೂರು: ಕೊಡಗು ಜಿಲ್ಲೆ, ಸುಳ್ಯ ತಾಲೂಕಿನ ಅರೆಭಾಷೆ ಮಾತನಾಡುವ ಜನರಿಗೆ ಸಿಹಿ ಸುದ್ದಿ ಪ್ರಕಟಗೊಂಡಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದ ಇಂದು ಮಂಡಿಸಿದ ಬಜೆಟ್ ನಲ್ಲಿ ಕರಾವಳಿಯ ಯಕ್ಷಗಾನ ಲೋಕಕ್ಕೆ ಬಂಪರ್ ಮನ್ನಣೆ ಸಿಕ್ಕಿದ್ದು ಒಂದು ವಿಚಾರವಾದರೆ ಜತೆಗೆ ಅರೆಭಾಷೆಗೂ ಒಂದು ಗೌರವದ ಸ್ಥಾನಮಾನ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ರಾಜ್ಯ ಸರಕಾರ ಘೋಷಿಸಿದೆ. ಉಳಿದಂತೆ ಶ್ರೀ ಯೋಗಿನಾರೇಯಣಾ ಯತೀಂದ್ರರ ಜಯಂತಿ ಆಚರಣೆ, ಸಾಂಸ್ಕೃತಿಕ ಶಿಬಿರಿ ಕಾರ್ಯಕ್ರಮ ಆಯೋಜನೆ, ಹಾವೇರಿ ಜಿಲ್ಲೆಯಲ್ಲಿ ರು. 2 ಕೋಟಿ ವೆಚ್ಚದಲ್ಲಿ ಸಾಂಸ್ಕೃತಿ ಭವನ ನಿರ್ಮಾಣ, ಕರಾವಳಿಯ ಗಡಿಭಾಗ ಕಾಸರಗೋಡು, ಅಕ್ಕಲಕೋಟೆ, ಗೋವಾದಲ್ಲಿ ಕನ್ನಡ ಭವನ ಸ್ಥಾಪನೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.