ಕರಾವಳಿ

ಬದಿಯಡ್ಕ : ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ; ಪಿಕಪ್ ಚಾಲಕ ದಾರುಣ ಅಂತ್ಯ

ನ್ಯೂಸ್ ನಾಟೌಟ್ : ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ಗೆ ಕೆ.ಎಸ್.ಆರ್.ಟಿ.ಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಪಿಕಪ್ ಚಾಲಕನ ದುರಂತ ಅಂತ್ಯವಾಗಿದೆ. ಈ ಘಟನೆ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಅಡ್ಕಸ್ಥಳದ ಸಮೀಪ ಮಂಗಳವಾರ ನಡೆದಿದೆ.

ಚಾಲಕನನ್ನು ಪೆರ್ಲ ಮಣಿಯಂಪಾರೆ ಪಜ್ಜನದ ಮುಸ್ತಫಾ ( 43) ಎಂದು ಗುರುತಿಸಲಾಗಿದೆ. ಬಸ್ ನ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ರಸ್ತೆ ಬದಿ ನಿಲ್ಲಿಸಿದ್ದ ಅಡಿಕೆ ಗಿಡ ಸಾಗಾಟದ ಪಿಕಪ್ ಗೆ ಬಸ್ಸು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡ ಮುಸ್ತಫಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.ಪಿಕಪ್ ವ್ಯಾನ್ ನಲ್ಲಿದ್ದ ಇನ್ನೋರ್ವ ಗಾಯಗೊಂಡಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Related posts

ನಾನಿನ್ನೂ ರಾಜೀನಾಮೆ ಕೊಟ್ಟಿಲ್ಲ..ಮಾಧ್ಯಮಗಳಲ್ಲಿ ಬಂದಿದ್ದು ಸತ್ಯಕ್ಕೆ ದೂರವಾಗಿದ್ದು: ನಳಿನ್ ಕುಮಾರ್ ಕಟೀಲ್

ತುಳು ಚಿತ್ರದಲ್ಲಿ ನಾನು ನಟಿಸಲು ಸಿದ್ಧ- ಅನಂತ್ ನಾಗ್ ,ತುಳು ಭಾಷೆ ಬಗ್ಗೆ ಹಿರಿಯ ನಟ ಹೇಳಿದ್ದೇನು?

ಉಪ್ಪಿನಂಗಡಿ: ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ..! ಬೆಳಗಾದರೆ ಎಲ್ಲರಿಗೂ ಗೊತ್ತಾಗುತ್ತೆ ಎಂದು ಕತ್ತು ಹಿಸುಕಿ ಕೊಂದ ಬಾಲಕ..!