ನ್ಯೂಸ್ ನಾಟೌಟ್ : ಕಡಲೆಕಾಯಿ ಹಸಿಯಾಗಿ ತಿಂದರೆ ಅತ್ಯದ್ಭುತ ಪ್ರಯೋಜನಗಳು ಸಿಗುತ್ತವೆ. ಇಂತಹ ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದೇ ಕರೆಯುತ್ತಾರೆ.
ಪ್ರತಿದಿನ ನೆನೆಸಿದ ಕಡಲೆಬೀಜ ತಿಂದರೆ ಹೆಚ್ಚಿನ ಲಾಭ ಪಡೆಯಬಹುದು ಅಂತಾರೆ ತಜ್ಞರು. ಹಾಗಿದ್ರೆ ಬನ್ನಿ ನೆನೆಸಿದ ಕಡಲೆಬೀಜ ಸೇವನೆಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳೇನು ನೋಡೋಣ.
ರಾತ್ರಿಯಿಡೀ ನೆನೆಸಿದ ಕಡಲೆಬೀಜ ತಿನ್ನುವುದರಿಂದ ನಮ್ಮ ಸ್ನಾಯುಗಳು ಬಲಗೊಳ್ಳುತ್ತವೆ. ಇದರಲ್ಲಿ ಪ್ರೋಟೀನ್ಗಳು ಯಥೇಚ್ಛವಾಗಿದ್ದು, ಬಾಡಿ ಬಿಲ್ಡಿಂಗ್ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ನೆನೆಸಿದ ಕಡಲೆ ಬೀಜ ಸೇವನೆ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಉತ್ತಮ ಜೀರ್ಣಕ್ರಿಯೆಗಾಗಿ ನೆನೆಸಿದ ಕಡಲೆಬೀಜ ತಿನ್ನಿ. ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನೆನೆಸಿದ ಕಡಲೆಬೀಜ ತಿನ್ನಬೇಕು. ಇದು ಅನೇಕ ಹೃದ್ರೋಗ ಸಮಸ್ಯೆಗಳನ್ನು ನಿವಾರಿಸುತ್ತದೆ. ಮತ್ತೊಂದು ಅದ್ಭುತ ಪ್ರಯೋಜನವೆಂದರೆ, ನೆನೆಸಿದ ಕಡಲೆ ಬೀಜ ಸೇವನೆಯು ಕ್ಯಾನ್ಸರ್ ಕೋಶದ ಬೆಳವಣಿಗೆಯನ್ನು ತಡೆಯುತ್ತದೆ. ಬೆನ್ನು ನೋವಿನ ಉಪಶಮನಕ್ಕಾಗಿ ಈ ನೆನೆಸಿದ ಕಡಲೆಬೀಜ ತಿನ್ನಿ. ಜೊತೆಗೆ ಗ್ಯಾಸ್ ಹಾಗೂ ಅಸಿಡಿಟಿ ಸಮಸ್ಯೆಯನ್ನು ತೊಡೆದು ಹಾಕುತ್ತದೆ. ನಮ್ಮ ಜ್ಞಾಪಕ ಶಕ್ತಿ ವೃದ್ಧಿಗೆ ಹಾಗೂ ಕಣ್ಣಿನ ದೃಷ್ಟಿ ಸುಧಾರಣೆ ಆಗಬೇಕು ಅಂದರೆ ನೆನೆಸಿದ ಕಡಲೆ ಬೀಜ ತಿನ್ನಬೇಕು. ಈ ನೆನೆಸಿದ ಕಡಲೆಬೀಜವನ್ನು ಯಾವಾಗ ತಿನ್ನಬೇಕು ಎನ್ನುವ ವಿಷಯವೂ ಸಹ ಮುಖ್ಯವಾಗುತ್ತದೆ. ನೆನೆಸಿದ ಕಡಲೆ ಬೀಜವನ್ನು ಬೆಳಗಿನ ಉಪಾಹಾರಕ್ಕೆ ಮೊದಲು ಸೇವಿಸಬೇಕು. ಯಾಕೆಂದ್ರೆ ಕಡಲೆಬೀಜಗಳು ತೂಕ ನಷ್ಟಕ್ಕೆ ಸಂಬಂಧಿಸಿದ್ದರಿಂದ ತಿಂಡಿ ತಿನ್ನುವ ಮೊದಲು ತಿನ್ನಬೇಕು.ಕಡಲೆಬೀಜದಲ್ಲಿ ಸಾಕಷ್ಟು ಕ್ಯಾಲೋರಿಗಳಿವೆ. ಹೀಗಾಗಿ ಹೆಚ್ಚಾಗಿ ತಿನ್ನಬಾರದು. ಸಮತೋಲಿತ ಆಹಾರದ ಭಾಗವಾಗಿ ನಿಯಮಿತವಾಗಿ ಸೇವಿಸುವುದರಿಂದ ತೂಕ ಕಳೆದುಕೊಳ್ಳಲು ಹಾಗೂ ಆರೋಗ್ಯ ಸುಧಾರಿಸಲು ಸಹಕರಿಸುತ್ತದೆ.