ನ್ಯೂಸ್ ನಾಟೌಟ್: ಕೆಲವರು ಭೂತ ಪ್ರೇತ ಆತ್ಮಗಳನ್ನು ನಂಬುತ್ತಾರೆ ಮತ್ತೂ ಕೆಲವರು ಅದು ಇಲ್ಲವೇ ಇಲ್ಲ, ಸಾಧ್ಯವೇ ಇಲ್ಲ ಅದೆಲ್ಲ ಮೂಢ ನಂಬಿಕೆ ಅಂತ ಹೇಳುವವರು ಇದ್ದಾರೆ. ಕೆಲವೊಮ್ಮೆ ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಇದು ಫೇಕ್ ವಿಡಿಯೋ ಎಂದು ಕೆಲವರು ಅಂದುಕೊಳ್ಳುತ್ತಿದ್ದರೂ, ಈ ವಿಡಿಯೋ ನೋಡಿದ ಮೇಲೆ ಅಚ್ಚರಿಯಾಗದೇ ಇರಲ್ಲ.
ಹಾಗಾದರೆ ಅದೇನೆಂದು ಈಗ ಇಲ್ಲಿ ತಿಳಿಯೋಣ ಬನ್ನಿ. ಮಗುವೊಂದನ್ನು ಮಲಗಿಸಿ ಹೋದ ಸಂದರ್ಭದಲ್ಲಿ ಪದೇ ಪದೇ ವಿಚಿತ್ರವಾಗಿ ಅಳುತ್ತಿತ್ತು, ಹಾಕಿದ ಹೊದಿಕೆ ಮಗುವಿನ ಮೇಲೆ ಇರುತ್ತಿರಲಿಲ್ಲ. ಈ ಪ್ರಕ್ರಿಯೆ ನಿರಂತರವಾಗಿ ನಡಿತಿತ್ತು. ಅದಕ್ಕಾಗಿಯೇ ಮಗುವಿನ ಅಪ್ಪ-ಅಮ್ಮ ಆ ಮಗುವಿನ ಬಳಿ ಸಿಸಿಟಿವಿ ಅಳವಡಿಸಿದ್ದಾರೆ. ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದಾಗ, ಮಗುವಿನ ತೊಟ್ಟಿಲ ಬಳಿ ವಿಚಿತ್ರ ಆಕೃತಿ ಕಾಣಿಸಿದೆ. ಕಣ್ಣು ಮಾತ್ರ ಕಾಣಿಸಿದ್ದು ಭಯಾನಕವಾಗಿದೆ.
ನೋಡೋದಕ್ಕೆ ದೆವ್ವದ ಆಕೃತಿಯಂತೆ ಇದು ಕಾಣಿಸುತ್ತಿದೆ. ಮಹಿಳೆಯ ಮುಖವನ್ನು ಹೋಲುವ ನೆರಳು ಇದಾಗಲಿದ್ದು, ಕೆಲವೇ ಕ್ಷಣಗಳಲ್ಲಿ, ಅದು ತೆಳುವಾದ ಗಾಳಿಯಲ್ಲಿ ಕಣ್ಮರೆಯಾಗುತ್ತದೆ. ಇದನ್ನು ನೋಡಿ ಕಮೆಂಟ್ಗಳಲ್ಲಿ ಕೆಲವರು ತಮ್ಮ ಮಗುವಿಗೂ ಇದೇ ರೀತಿ ಆದ ಅನುಭವವನ್ನು ತೆರೆದಿಟ್ಟರೆ, ಮತ್ತೆ ಕೆಲವರು ತಮ್ಮ ಸಂಬಂಧಿಕರು, ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ತಿಳಿಸಿದ್ದಾರೆ.
ಹಾಗಾದರೆ ಇದು ನಿಜಾನಾ?
ಈ ಕಾಲದಲ್ಲಿ ಏನು ಬೇಕಾದರೂ ಮಾಡಬಹುದು. ಯಾರ ತಲೆಯನ್ನು ಯಾರ ಶರೀರದ ಮೇಲೆಯೂ ಕೂರಿಸಬಹುದು.ಈ ಎಡಿಟೆಡ್ ಯುಗದಲ್ಲಿ ಎಐ ಬಂದ ಮೇಲಂತೂ ಯಾವುದೂ ಅಸಾಧ್ಯವಲ್ಲ ಎನ್ನುವ ಸ್ಥಿತಿ ತಲುಪಿದೆ. ಆದ್ದರಿಂದ ಇದು ಕಾಲ್ಪನಿಕವೋ, ಭಯ ಹುಟ್ಟಿಸಲು ಸುಖಾಸುಮ್ಮನೆ ಮಾಡಿರುವ ವಿಡಿಯೋನೋ ಅಥವಾ ಯಾರ ಊಹೆಗೂ ನಿಲುಕದ್ದ ವಿಚಿತ್ರವೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ!. ಈ ಹಿಂದೆ ಭೂತ, ಪ್ರೇತಗಳ ಬಗ್ಗೆ ಖ್ಯಾತ ಘೋಸ್ಟ್ ಹಂಟರ್ ಇಮ್ರಾನ್ ಮಾತನಾಡಿದ್ದರು. ಭೂತ,ಪ್ರೇತಗಳು ಯಾರಿಗೆ ಕಾಣಿಸಿಕೊಳ್ಳುತ್ತವೆ ಎಂಬುದನ್ನು ವಿವರಿಸಿದ್ದರು. ಎಲ್ಲರಿಗೂ ತಿಳಿದಿರುವಂತೆ ಮೂರು ಗಣಗಳಿವೆ. ಪ್ರತಿಯೊಬ್ಬ ಮನುಷ್ಯರೂ ಒಂದೊಂದು ಗಣಗಳಿಗೆ ಸೇರಿರುತ್ತಾರೆ. ರಾಕ್ಷಸ ಗಣ, ದೇವ ಗಣ ಮತ್ತು ಮನುಷ್ಯ ಗಣ. ಈ ಪೈಕಿ ರಾಕ್ಷಸ ಗಣದವರಿಗೆ ಇವು ಕಾಣಿಸಿಕೊಳ್ಳುತ್ತದೆ. ದೇವ ಗಣದವರಿಗೆ ಕಾಣಿಸಿಕೊಳ್ಳುತ್ತದೆ, ಆದರೆ ಅದಕ್ಕೆ ಪರಿಹಾರ ಮಾಡಿಕೊಳ್ಳಬಹುದು. ಆದ್ದರಿಂದ, ಇವುಗಳು ಗೋಚರಿಸುವುದು ಹುಟ್ಟು ನಕ್ಷತ್ರ, ದಿನಾಂಕ ಗೋತ್ರದ ಮೇಲೂ ಹೋಗುತ್ತದೆ ಎಂದಿದ್ದರು ಇಮ್ರಾನ್. ಹಾಗಿದ್ದ ಮೇಲೆ ಸಿಸಿಟಿವಿಯಲ್ಲಿ ಈ ದೃಶ್ಯ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎನ್ನುವುದು ಕೂಡ ಪ್ರಶ್ನಾರ್ಥವಾಗಿದೆ.
View this post on Instagram