ಕ್ರೈಂವೈರಲ್ ನ್ಯೂಸ್

ಗಣಪತಿ ವಿಸರ್ಜನೆ ಆಟವಾಡುತ್ತಿದ್ದ ಮಗುವಿನ ದುರಂತ ಅಂತ್ಯ! 3 ವರ್ಷದ ಮಗು ಬಾವಿಗೆ ಬಿದ್ದದ್ದು ಹೇಗೆ? ಏನಿದು ದೇವರ ಆಟ?

292

ನ್ಯೂಸ್‌ ನಾಟೌಟ್‌: ಪುಟ್ಟ ಮಗುವಿನ ಬಾಳಲ್ಲಿ ದೇವರ ಆಟವಾಡುವಾಗ ದೇವರೇ ಮಗುವಿನ ಬದುಕಿನ ಆಟ ಮುಗಿಸಿದ ದುರ್ಘಟನೆಯೊಂದು ಕಾರವಾರದ ಹರಿದೇವ ನಗರದಲ್ಲಿ ನಡೆದಿದೆ.

3 ವರ್ಷದ ಹೆಣ್ಣು ಮಗುವೊಂದು ಶನಿವಾರ ಗಣಪತಿ ಮುಳುಗಿಸುವ ಆಟವಾಡಲು ಹೋಗಿ ಮನೆ ಬಳಿ ಇದ್ದ ಸರ್ಕಾರಿ ಬಾವಿಗೆ ಬಿದ್ದು ಕೊನೆಯುಸಿರೆಳೆದಿದೆ.
ಶನಿವಾರ ಬೆಳಗ್ಗೆ ಮಣ್ಣನ್ನು ತೆಗೆದುಕೊಂಡು ಗಣಪತಿ ಮೂರ್ತಿ ತಯಾರಿಸುತ್ತಾ ಆಟವಾಡುತ್ತಿದ್ದ ಮಗು, ಕೆಲ ಹೊತ್ತಿನ ಬಳಿಕ ಮನೆಯಿಂದ ನೂರು ಮೀಟರ್‌ ದೂರದಲ್ಲಿರುವ ನಗರಸಭೆಯ ಬಾವಿಗೆ ತೆರಳಿ ಗಣಪತಿಯ ವಿಸರ್ಜನೆಗೆ ಮುಂದಾಗಿದೆ. ಈ ವೇಳೆ ಬಾವಿಯ ಕಟ್ಟೆಯು ಚಿಕ್ಕದಾಗಿದ್ದ ಕಾರಣ ಕಾಲು ಜಾರಿ ಮಗು ಬಾವಿಗೆ ಬಿದ್ದಿದ್ದಾಳೆ. ಸೂರಜ ಬಂಟ್‌ ಎನ್ನುವವರ ಮಗಳು ಸ್ತುತಿ ಈ ದುರ್ಘಟನೆಯಲ್ಲಿ ಮಡಿದಿದ್ದಾಳೆ ಎಂದು ವರದಿ ತಿಳಿಸಿದೆ.

ಮಧ್ಯಾಹ್ನ 12 ಗಂಟೆಗೆ ಮಗು ಕಾಣದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ ಕುಟುಂಬಸ್ಥರು, ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದ್ದಾರೆ. ದೂರಿನ ಅನ್ವಯ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರೊಂದಿಗೆ ಸುಮಾರು 2 ಗಂಟೆಗು ಹೆಚ್ಚು ಕಾಲ ಹುಡುಕಾಡಿದ್ದಾರೆ. ಎಲ್ಲಿಯೂ ಮಗುವಿನ ಸುಳಿವು ಸಿಗದಾದಾಗ ವಾಟ್ಸಪ್‌ಗಳಲ್ಲಿ ಮಗುವಿನ ಫೊಟೊ ಹರಿಬಿಟ್ಟು, ಎಲ್ಲಿಯಾದರೂ ಕಂಡಲ್ಲಿ ಮಾಹಿತಿ ನೀಡಲು ಕೋರಿದ್ದಾರೆ.

ಆದರೆ ಸುಮಾರು 2 ರಿಂದ 2.30ರ ಹೊತ್ತಿಗೆ ಸಾರ್ವಜನಿಕ ಬಾವಿಯಲ್ಲೊಮ್ಮೆ ನೋಡೋಣವೆಂದು ಸ್ಥಳೀಯರೊಬ್ಬರು ಇಳಿದಾಗ ಆಳದಲ್ಲಿ ಮಗುವಿನ ಮೃತದೇಹ ದೊರೆತಿದೆ. ಮಗುವಿನ ತಾಯಿಗೆ ಈಗಾಗಲೇ ಒಂದು ವರ್ಷದ ಮತ್ತೊಂದು ಮಗು ಇದ್ದು, ತಂದೆ ಕೊರಿಯರ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಗುವಿನ ತಂದೆ ಬೆಳಗ್ಗೆ ಹೋದವರು ವಾಪಸ್ಸು ಬಂದಿರಲಿಲ್ಲ. ತಾಯಿ ಚಿಕ್ಕ ಮಗುವಿಗೆ ಹಾಲುಣಿಸಿ ಮಲಗಿಸಿ ಬರುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ.
ನಗರಸಭೆಯಿಂದ ಎರಡು ಸಾರ್ವಜನಿಕ ಬಾವಿ ತೆರೆಯಲಾಗಿದೆ. ಒಂದು ಬಾವಿಗೆ ಸ್ಥಳೀಯರ ದೂರಿನ ಮೇರೆಗೆ ಎತ್ತರಕ್ಕೆ ಕಟ್ಟೆ ಕಟ್ಟಿದ್ದು, ಯಾವುದೇ ಅಪಾಯ ಎದುರಾಗದಂತೆ ಮಾಡಲಾಗಿದೆ. ಆದರೆ ಮತ್ತೊಂದು ಬಾವಿಗೆ ಹಾಗೇ ಬಿಡಲಾಗಿದೆ ಎಂದು ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

See also  ಕುಂಬ್ರದಿಂದ ತಂದೆಯೊಂದಿಗೆ ಬಸ್ ಹತ್ತಿದ ಬಾಲಕ ಸುಳ್ಯದಲ್ಲಿ ನಾಪತ್ತೆ..!, ತಂದೆಯಿಂದ ಹುಡುಕಾಟ, ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget