ಕ್ರೈಂವೈರಲ್ ನ್ಯೂಸ್

ಹಾಲು ತರುತ್ತಿದ್ದ ಪುಟ್ಟ ಬಾಲಕಿ ಮೇಲೆ 60ರ ಅಜ್ಜನಿಂದ ಅತ್ಯಾಚಾರ..! 13 ರ ಬಾಲಕಿ ಈಗ ಗರ್ಭಿಣಿ..!

167

ನ್ಯೂಸ್ ನಾಟೌಟ್: 13 ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧನೊಬ್ಬ ಅತ್ಯಾಚಾರ ನಡೆಸಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಪೋಷಕರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿ ಈಗ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದಾಳೆ. 13 ವರ್ಷದ ಮಗಳ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದಾರೆ. ಇನ್ನು ಯಾರು ಹೀಗೆ ಮಾಡಿದ್ದು ಎಂದು ಪ್ರಶ್ನಿಸಿದಾಗ ವೃದ್ಧನ ಹೆಸರು ಬಾಯ್ಬಿಟಿದ್ದಾಳೆ ಎನ್ನಲಾಗಿದೆ.

ಆರೋಪಿ ವೃದ್ಧನ ಮನೆಗೆ ಹಾಲು ಕೊಡಲು ಬಾಲಕಿಯ ತಂದೆ ಹೋಗುತ್ತಿದ್ದರು. ಕೆಲವೊಂದು ಸಮಯದಲ್ಲಿ ತಂದೆ ಇಲ್ಲದ ದಿನ, ಈ ಬಾಲಕಿಯೇ ಹಾಲು ಕೊಡಲು ವೃದ್ಧನ ಮನೆಗೆ ಹೋಗುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಿಳಿದು ಬಂದಿದೆ. ಇನ್ನು ಈ ವೃದ್ಧ, 5 ವರ್ಷಗಳ ಹಿಂದೆಯೂ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ.

ಆದರೆ, ಭಯದಿಂದ ಬಾಲಕಿ ಸುಮ್ಮನಿದ್ದಳು. ಇದೀಗ ಐದು ವರ್ಷಗಳ ಬಳಿಕ ಮತ್ತೆ ಹಾಲು ಕೊಟ್ಟು ಬರಲು ಮನೆಗೆ ತೆರಳಿದ್ದ ವೇಳೆ ಮೊದಲಿನಂತೆಯೇ ಸಲುಗೆ ಬೆಳಸಿ ಕುಕೃತ್ಯವೆಸಗಿದ್ದಾನೆ. ಇದೀಗ ಅತ್ಯಾಚಾರ ಆರೋಪದಡಿ 60 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದು, ಮಾಗಡಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

See also  ಕೋತಿಗಳ ಕಾದಾಟದಿಂದ ರೈಲು ಸಂಚಾರ ವಿಳಂಬ..! ಇಲ್ಲಿದೆ ವಿಚಿತ್ರ ಘಟನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget