ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಗಂಟಲು ಸೀಳಿದ ಸ್ಥಿತಿಯಲ್ಲಿ ಜೀವಂತ ಶಿಶು ಕಸದ ತೊಟ್ಟಿಯಲ್ಲಿ ಪತ್ತೆ..! ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು..!

ನ್ಯೂಸ್ ನಾಟೌಟ್: ಕಸದ ತೊಟ್ಟಿಯಲ್ಲಿ ನವಜಾತ ಹೆಣ್ಣು ಶಿಶುವೊಂದು ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಮಧ್ಯಪ್ರದೇಶದ ರಾಜ್‌ ಗಢ ಜಿಲ್ಲೆಯ ಪಚೋರ್‌ ಪಟ್ಟಣದಲ್ಲಿ ಶನಿವಾರ(ಜ.11) ಪತ್ತೆಯಾಗಿದೆ.

ಶಿಶು ಚೀರಾಡುತ್ತಿದ್ದನ್ನು ಕೇಳಿಸಿಕೊಂಡ ಪಾದಚಾರಿಗಳು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

‘ಶಿಶುವಿನ ಗಂಟಲಿನ ಮೇಲ್ಭಾಗವನ್ನು ಹರಿತವಾದ ಆಯುಧದಿಂದ ಸೀಳಲಾಗಿದೆ’ ಎಂದಿರುವ ವೈದ್ಯ ಡಾ.ಪಿಎಸ್‌.ಪರ್ಮಾರ್‌, ‘ಮಗು ಜನಿಸಿ ಒಂದೆರಡು ದಿನವಾಗಿದೆಯಷ್ಟೇ. ಪ್ರಥಮ ಚಿಕಿತ್ಸೆ ನೀಡಿ, ರಾಜ್‌ ಗಢ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ’ ಎಂದಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಭೋಪಾಲ್‌ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂದು ರಾಜ್‌ಗಢದ ಆರೋಗ್ಯಾಧಿಕಾರಿ ಡಾ ಕಿರಣ್ ವಾಡಿಯಾ ಮಾಹಿತಿ ನೀಡಿದ್ದಾರೆ.

Click

https://newsnotout.com/2025/01/mangaluru-kambala-inaguaration-ullala-mangaluru-v-news/
https://newsnotout.com/2025/01/rishab-shetty-kannada-news-anjaneya-swami-film-issue-kannada-news-cinema/
https://newsnotout.com/2025/01/kambala-ct-ravi-kannada-news-15-days-deadline-viral-latter/

Related posts

ನೀವೂ ಬಿರಿಯಾನಿ ಪ್ರಿಯರಾ..? ಬಿರಿಯಾನಿ ಹೋಟೆಲ್‌ ನಿಂದ ಕೋಟಿ ಕೋಟಿ ಹಣ ವಶಕ್ಕೆ..! ಏನಿದು ಫೇಮಸ್ ಬಿರಿಯಾನಿ ಮಾರಾಟದ ವಂಚನೆ?

ಅಭಿ ಕೊಲ್ಲಿ ಬಳಿ ಬೋರಲು ಬಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ದುರಂತ

ವಿದ್ಯಾರ್ಥಿನಿಯರ ಟಾಯ್ಲೆಟ್‌ನಲ್ಲಿ ಸಿಸಿಟಿವಿ ಇರಿಸಿದ ಶಾಲಾ ಮುಖ್ಯೋಪಾಧ್ಯಾಯ..! ಕಾಮಾಂಧ ಶಿಕ್ಷಕನಿಗೆ ಹಿಗ್ಗಾಮುಗ್ಗ ಥಳಿಸಿದ ಪೋಷಕರು..! ಇಲ್ಲಿದೆ ವಿಡಿಯೋ