ಕಾಸರಗೋಡು

ಕಾಸರಗೋಡು: ಕಾರು ಪಾರ್ಕ್ ಮಾಡುವಾಗ ಕಾರಿನಡಿಗೆ ಬಿದ್ದು ಎಳೆಯ ಕಂದಮ್ಮ ಸಾವು, ವಿಡಿಯೋ ವೈರಲ್‌, ವಾಹನ ಚಾಲಕರೇ ಪಾರ್ಕ್‌ ಮಾಡುವಾಗ ಹುಷಾರ್‌..!

37
Spread the love

ನ್ಯೂಸ್‌ ನಾಟೌಟ್‌: ವಾಹನ ಪಾರ್ಕ್‌ ಮಾಡುವಾಗ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ನಿರ್ಲಕ್ಷ್ಯಗಳಿಗೂ ದೊಡ್ಡ ಬೆಲೆ ತರಬೇಕಾದಿತು. ಇಂಥದೊಂದು ಘಟನೆಗೆ ಸಾಕ್ಷಿಯಾಗಿದೆ ಕಾಸರಗೋಡಿನಲ್ಲಿ ಸಂಭವಿಸಿದ ಈ ಘಟನೆ.

ಮನೆಯಿಂದ ಕಾರಿನಲ್ಲಿ ಹೊರ ಹೋಗಿದ್ದ ವೃದ್ಧರೊಬ್ಬರು ಮರಳಿ ವಾಪಸ್‌ ಬರುವಾಗ ಅಚಾನಕ್‌ ಆಗಿ ಎಳೆಯ ಮಗುವೊಂದು ಕಾರಿನಡಿಗೆ ಬಿದ್ದು ಮೃತ ಪಟ್ಟ ಘಟನೆ ಕಾಸರಗೋಡಿನ ಉಪ್ಪಳ ಸೋಂಕಾಲ್‌ ನಲ್ಲಿ ನಡೆದಿದೆ. ಕಾರಿನಲ್ಲಿ ವೃದ್ಧ ವಾಪಾಸ್‌ ಮನೆಗೆ ಬಂದಾಗ ಎರಡು ಮಕ್ಕಳು ಅಂಗಳದಲ್ಲಿದ್ದು, ಓರ್ವ ಚಿಕ್ಕ ಹುಡುಗ ಮಕ್ಕಳು ಆಟವಾಡುವ ಸೈಕಲ್‌ ಅನ್ನು ಬದಿಗೆ ಸರಿಸುತ್ತಾನೆ. ಅದೇ ವೇಳೆ ಎಳೆಯ ಮಗವೊಂದು ಕೂಡ ಅಲ್ಲಿ ಆಟವಾಡುತ್ತಿರುತ್ತದೆ. ಆದರೆ ಅದನ್ನು ಗಮನಿಸಿದೆ ಚಾಲಕ ಕಾರು ಚಲಾಯಿಸಿದ್ದಾರೆ. ಈ ವೇಳೆ ಮಗು ನೋವಿನಿಂದ ಜೋರಾಗಿ ಚೀರುತ್ತದೆ. ಅಲ್ಲದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಕೂಡ ಅಲ್ಲಿಗೆ ಬರುವುದು ದಾಖಲಾಗಿದೆ. ಈ ದೃಶ್ಯ ಮನೆಯಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

See also  ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಳಕ್ಕೆ ನೂತನ ಧ್ವಜಸ್ತಂಭದ ಮೆರವಣಿಗೆ
  Ad Widget   Ad Widget   Ad Widget   Ad Widget