ರಾಜ್ಯ

ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಮಗು ಮೃತ್ಯು,ಏನಿದು ಮನಕಲಕುವ ಘಟನೆ?

ನ್ಯೂಸ್‌ ನಾಟೌಟ್‌ :ಪುಟ್ಟ ಮಕ್ಕಳನ್ನು ಎಷ್ಟು ಜಾಗರೂಕತೆಯಿಂದ ನೋಡಿಕೊಂಡರೂ ಕಣ್ಣು ಮುಚ್ಚುವುದರೊಳಗೆ ಏನಾದರೊಂದು ಎಡವಟ್ಟಗಳನ್ನು ಮಾಡುತ್ತಲೇ ಇರುತ್ತಾರೆ.ಹೀಗಾಗಿ ಸ್ವಲ್ಪ ಯಾಮಾರಿದ್ರೂ ಕೂಡ ಅಪಾಯಗಳು ಸಂಭವಿಸಬಹುದು. ಈ ಬಗ್ಗೆ ಪೋಷಕರು ಎಚ್ಚರದಿಂದಿರಬೇಕಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮನಕಲಕುವ ಘಟನೆ ಬಗ್ಗೆ ವರದಿಯಾಗಿದ್ದು, ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದು ವರ್ಷ ಎರಡು ತಿಂಗಳ ಮಗು ಸಾವನ್ನಪ್ಪಿದೆ. ಇಲ್ಲಿನ ಜೋಸೆಫ್ ನಗರದಲ್ಲಿ ಮನೆಯಲ್ಲಿ ವಾಸವಿದ್ದ ಆಸಿಫ್ ಎಂಬವರ ಪುತ್ರಿ ಆನಂ ಫಾತಿಮಾ ಮೃತ ಮಗು ಎಂದು ತಿಳಿದು ಬಂದಿದೆ. ರವಿವಾರ ಸಂಜೆ ಮಗು ಆನಂ ಮನೆಯಲ್ಲಿನ ಶೌಚಾಲಯದಲ್ಲಿದ್ದ ನೀರು ತುಂಬಿದ್ದ ಬಕೆಟ್ ಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದೆ ಎಂದು ಹೇಳಲಾಗಿದೆ.

Related posts

ದರ್ಶನ್‌ ಸೇರಿ ಹತ್ತಕ್ಕೂ ಹೆಚ್ಚು ಜನರ ಫಿಂಗರ್ ಪ್ರಿಂಟ್ ಮ್ಯಾಚ್..! ರೇಣುಕಾಸ್ವಾಮಿ ಕೊಲೆ‌ ಪ್ರಕರಣಕ್ಕೆ ಪ್ರಬಲ ಸಾಕ್ಷಿ ಕೊಟ್ಟ ಎಫ್‌ಎಸ್‌ಎಲ್‌ ವರದಿ..!

ಮಾವು‌ ಮೇಳದಲ್ಲಿ ಕಾಣಿಸಿಕೊಂಡ ಅತಿ ಅಪರೂಪದ ದುಬಾರಿ ಮಾವು..! ಕೆ.ಜಿ ಗೆ 2.5 ಲಕ್ಷ ರೂ.ಬೆಲೆಯ ಈ ಮಾವು ಬೆಳೆದದ್ದೆಲ್ಲಿ..?

ನಟ ದರ್ಶನ್ ನನ್ನು ಬಂಧಿಸಿದ ರಿಯಲ್ ಪೊಲೀಸ್ ‘ಸಿಂಗಂ’ ಯಾರು..? ಬಂಧನಕ್ಕೂ ಮೊದಲು ಆ ಖಡಕ್ ಅಧಿಕಾರಿಯಿಂದ ನಡೆದಿತ್ತು ರಾತ್ರಿಯಿಡೀ ಸಿದ್ಧತೆ..! ಇಲ್ಲಿದೆ ಓದಿ ‘ಪಿನ್ ಟು ಪಿನ್’ ರೋಚಕ ಡಿಟೇಲ್ಸ್