ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ‘ಡೈವೋರ್ಸ್’​ ಕೇಳಿದ ಗಂಡ..! ಈ ಬಗ್ಗೆ ಆಕೆ ಹೇಳಿದ್ದೇನು..?

ನ್ಯೂಸ್ ನಾಟೌಟ್: ಚೀನಾದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ತಮಗೆ ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ಅನುಮಾನಗೊಂಡ ವ್ಯಕ್ತಿ ಹೆಂಡತಿಯಿಂದ ವಿಚ್ಛೇದನ ಕೋರಿದ್ದಾನೆ.

ತಾನು, ತನ್ನ ಹೆಂಡತಿ ಇಬ್ಬರೂ ಬಿಳಿ ಬಣ್ಣದವರಾಗಿದ್ದರೂ ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ಆ ಗಂಡ ಡಿ.ಎನ್.​ಎ ಪರೀಕ್ಷೆಗೆ ಒತ್ತಾಯಿಸಿದ್ದಾನೆ. ಹೆಂಡತಿಯ ಚಾರಿತ್ರ್ಯ ಸರಿಯಿಲ್ಲವೆಂದು ಆತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎಂದು ವರದಿ ತಿಳಿಸಿದೆ.

ಸುಮಾರು 1 ತಿಂಗಳ ಹಿಂದೆ 30 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಅವರಿಗೆ ಕಪ್ಪು ಬಣ್ಣದ ಮಗು ಹುಟ್ಟಿತ್ತು. ಆಕೆ ಮತ್ತು ಆಕೆಯ ಗಂಡ ಬಿಳಿ ಬಣ್ಣದವರಾಗಿದ್ದು, ಕಪ್ಪು ಮಗು ಹೇಗೆ ಹುಟ್ಟಿತು ಎಂದು ಆಕೆಯ ಪತಿ ಅನುಮಾನಗೊಂಡು, ಇದೇ ಕಾರಣವನ್ನಿಟ್ಟುಕೊಂಡು ಆತ ವಿಚ್ಛೇದನ ಕೋರಿದ್ದಾನೆ.

ಮಗುವಿನ ಕಪ್ಪು ಮೈಬಣ್ಣದಿಂದ ತನಗೂ ಆಶ್ಚರ್ಯವಾಯಿತು ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಆದರೆ, ಮಗುವಿನ ಬಣ್ಣದ ಕಾರಣಕ್ಕೆ ನಾನು ಹೆತ್ತ ಮಗುವನ್ನು ಕೈಬಿಡುವುದಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ. ಆಕೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಚರ್ಚೆಗೆ ಗ್ರಾಸವಾಗಿದೆ.

Click

https://newsnotout.com/2024/11/salman-khan-kannada-news-rayachur-viral-news-perents/
https://newsnotout.com/2024/11/puttur-kambala-bettu-kananda-news-cctv/
https://newsnotout.com/2024/11/uppinangady-kadaba-taluk-kannada-news-house-in-govt-land/
https://newsnotout.com/2024/11/jammu-and-kashmir-kannada-news-5-2-earthquck-hd/
https://newsnotout.com/2024/11/sathish-sail-kannada-news-highcourt-bail-kannad-anews-jail-d/

Related posts

ಟಾಟಾ ಕ್ಸೆನನ್ ಹಾಗೂ ಸ್ವಿಫ್ಟ್ ಮುಖಾಮುಖಿ ಡಿಕ್ಕಿ, ಮೂವರು ಅಪಾಯದಿಂದ ಪಾರು

ಅಂದು ಪ್ರಧಾನಿ ಮೋದಿ ಮಾತು ಕೇಳಿದ್ದರೆ 5 ವರ್ಷ ನಾನೇ ಸಿಎಂ ಆಗಿರುತ್ತಿದ್ದೆ! ಎಚ್​​ಡಿಕೆ ಸ್ಫೋಟಕ ಹೇಳಿಕೆಯ ಹಿಂದಿನ ರಹಸ್ಯವೇನು?

ನಿಧಿ ಆಸೆಗಾಗಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಹೋದವರಿಗೆ ಸಿಕ್ಕಿದ್ದೇನು..? ಕಿಡಿಗೇಡಿಗಳು ಅರ್ಧಕ್ಕೆ ಬಿಟ್ಟು ಪರಾರಿಯಾದದ್ದೇಕೆ..?