ಕ್ರೈಂವೈರಲ್ ನ್ಯೂಸ್

ಆಟವಾಡುತ್ತಿದ್ದ ವೇಳೆ ಹಾವನ್ನು ಕಚ್ಚಿ ಕೊಂದ 1 ವರ್ಷದ ಮಗು..! ಮಗುವನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದೇನು..?

255

ನ್ಯೂಸ್ ನಾಟೌಟ್: ಒಂದು ವರ್ಷದ ಮಗು ತನ್ನ ಮನೆಯ ಟೆರೇಸ್ ಮೇಲೆ ಆಟವಾಡುತ್ತಿದ್ದ ವೇಳೆ ಮೂರು ಅಡಿ ಉದ್ದದ ಹಾವನ್ನು ಆಟಿಕೆ ಎಂದು ಭಾವಿಸಿ ಕಚ್ಚಿ ಕೊಂದ ಘಟನೆ ನಡೆದಿದೆ.

ಬಿಹಾರದ ಗಯಾದ ಫತೇಪುರ್ ಈ ಘಟನೆ ನಡೆದಿದೆ. ಮಗುವಿನ ಕೈಯಲ್ಲಿ ಸತ್ತ ಹಾವನ್ನು ಕಂಡು ಪೋಷಕರು ಬೆಚ್ಚಿಬಿದ್ದಿದ್ದು, ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ವೈದ್ಯರು ಪರೀಕ್ಷಿಸಿದಾಗ ಆರೋಗ್ಯ ಸ್ಥಿರವಾಗಿತ್ತು.

ಆಸ್ಪತ್ರೆಯ ಅಧಿಕಾರಿಗಳು ಮಗುವಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿ ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಮಗು ಕಚ್ಚಿದ ಕಾರಣ ಹಾವು ಸಾವನ್ನಪ್ಪಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಹಾವು ವಿಷಕಾರಿಯಲ್ಲ, ಆದ್ದರಿಂದ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Click

https://newsnotout.com/2024/08/bantwal-netravathi-river-issue-kannada-news-body-found/
https://newsnotout.com/2024/08/hijra-case-boy-suspence-issue-at-bengaluru-kannada-news-police/
https://newsnotout.com/2024/08/cm-siddaramayya-muda-case-and-his-wife-wrote-a-latter-t/
See also  ಮತ್ತೆ ಬರುತ್ತಾ 1,000 ರೂಪಾಯಿ ನೋಟು..? ಆರ್ ಬಿ ಐ ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget