ಕ್ರೈಂಬೆಂಗಳೂರುವೈರಲ್ ನ್ಯೂಸ್

ಸದ್ಯಕ್ಕೆ ಮಗು ಮಾಡಿಕೊಳ್ಳುವುದು ಬೇಡ ಎಂದ ಪತ್ನಿ..! ಕತ್ತು ಹಿಸುಕಿ ಕೊಂದ ಪತಿ..!

ನ್ಯೂಸ್ ನಾಟೌಟ್: ಪ್ರೀತಿಸಿ ಮದುವೆ ಅವರು ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. ವಿಪರ್ಯಾಯವೆಂದರೆ ಕೊಲೆಯಲ್ಲಿ ಅಂತ್ಯವಾಗಿದೆ. ಭಟ್ಕಳಾ ಮೂಲದ ಗಿರಿಜಾ (30) ಕೊಲೆಯಾದವರು. ಗಿರಿಜಾಳನ್ನು ಉಸಿರುಗಟ್ಟಿಸಿ ಪತಿ ನವೀನ್ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಎಚ್‌ಎಎಲ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಲ್ಲಿ ಘಟನೆ ನಡೆದಿದೆ.

ಗಿರಿಜಾ ಮತ್ತು ನವೀನ್ ಕಳೆದ ಎಂಟು ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಇತ್ತೀಚೆಗೆ ಗರ್ಭಿಣಿಯಾಗಿದ್ದ ಗಿರಿಜಾಗೆ ಗರ್ಭಪಾತ ಆಗಿತ್ತು. ಗರ್ಭಪಾತ ಆಗಿದ್ದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಗಿರಿಜಾ, ಸದ್ಯಕ್ಕೆ ಮಗು ಬೇಡ ಅಂದಿದ್ದಳು. ಆದರೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಂಡ- ಹೆಂಡತಿ ನಡುವೆ ಸದಾ ಗಲಾಟೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಕಳೆದ ಏಪ್ರಿಲ್‌ 12ರಂದು ಮಗು ಮಾಡಿಕೊಳ್ಳುವ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿದೆ. ಸಿಟ್ಟಿನಲ್ಲಿ ಪತ್ನಿ ಗಿರಿಜಾ ಮಲಗಿರುವಾಗ ನವೀನ್‌ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇನ್ನೂ ಬೆಂಗಳೂರಿನ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಗಿರಿಜಾಗೆ ನವೀನ್‌ನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಲು ಬಹಳ ಸಮಯವೇನು ಹಿಡಿದಿರಲಿಲ್ಲ. ಇವರಿಬ್ಬರ ಪ್ರೀತಿಗೆ ಗಿರಿಜಾ ಪೋಷಕರು ಪ್ರಾರಂಭದಲ್ಲಿ ವಿರೋಧ ತೋರಿದ್ದರು. ಆದರೆ ಕೊನೆಗೆ ಇವರ ಮದುವೆಗೆ ಒಪ್ಪಿಕೊಂಡಿದ್ದರು. ಈ ಮಧ್ಯೆ ಮಗು ವಿಚಾರಕ್ಕೆ ಇಬ್ಬರು ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು. ಕಳೆದ ಏ.12ರ ರಾತ್ರಿಯೂ ನವೀನ್ ಮತ್ತು ಗಿರಿಜಾ ಮಧ್ಯೆ ಜಗಳ ಶುರುವಾಗಿತ್ತು. ಕೋಪದ ಕೈಗೆ ಬುದ್ಧಿಕೊಟ್ಟ ನವೀನ್‌ ಗಿರಿಜಾಳ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು, ಆರೋಪಿ ನವೀನ್‌ನನ್ನು ಬಂಧಿಸಿದ್ದರು.

Related posts

ಅರಣ್ಯ ಇಲಾಖೆಗೆ ಕೊಟ್ಟ ಮಾತನ್ನು ತಪ್ಪಿದರೇ ನಟ ಗೋಲ್ಡನ್ ಸ್ಟಾರ್ ಗಣೇಶ್? ಹೈಕೋರ್ಟ್‌ನಲ್ಲಿ ನಟ ಗಣೇಶ್​ಗೆ ಹೇಳಿದ್ದೇನು?

ಹೊಸ ಸೇತುವೆಯ ಮೇಲೆ ಲಾಂಗ್ ಹಿಡಿದು ಆಟವಾಡಿದ ಕಿಡಿಗೇಡಿಗಳು

ಆಗುಂಬೆ ಘಾಟಿಯಲ್ಲಿ ಬೃಹತ್ ಮರ ಬಿದ್ದು ವಾಹನ ಸಂಚಾರ ಸ್ಥಗಿತ..! ಒಮ್ನಿ ಕಾರು ಜಖಂ..!