ಕರಾವಳಿ

ಅಯ್ಯಪ್ಪ ಮಾಲಾಧಾರಿ ಬಾಲಕನ ಮೇಲೆ ಮುಸ್ಲಿಂ ವಿದ್ಯಾರ್ಥಿಗಳಿಂದ ಹಲ್ಲೆ

ನ್ಯೂಸ್ ನಾಟೌಟ್: ಅಯ್ಯಪ್ಪ ಮಾಲೆ ಧರಿಸಿದ ಬಾಲಕನ ಮೇಲೆ ಮುಸ್ಲಿಂ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಾಲಕ ಮಾಲೆ ಧರಿಸಿದ್ದಾನೆ ಎನ್ನುವ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಗಳು ಆತನಿಗೆ ಹೊಡೆದು ಕೊರಳಿನಲ್ಲಿದ್ದ ಮಾಲೆಯನ್ನು ಕಿತ್ತು ಬಿಸಾಕಿದ್ದಾರೆ ಎನ್ನಲಾಗಿದೆ.

ಏನಿದು ಘಟನೆ?

ಅಯ್ಯಪ್ಪ ಮಾಲಾಧಾರಿ ಬಾಲಕನ ಮೇಲೆ ಮಾರಾಮಾರಿ ಹಲ್ಲೆ ನಡೆಸಿದ ಮುಸ್ಲಿಂ ವಿದ್ಯಾರ್ಥಿಗಳು, ಬಾಲಕನು ಅಯ್ಯಪ್ಪ ಸ್ವಾಮಿಯ ಮಾಲೇ ಧರಿಸಿದ್ದಾನೆ ಎಂಬ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಗಳು ಸೇರಿ ಆತನಿಗೆ ಹೊಡೆದಿದ್ದಾರೆ. ಅಷ್ಟೇ ಅಲ್ಲದೇ ಆತ ಧರಿಸಿದ್ದ ಮಾಲೆಯನ್ನು ಕಿತ್ತು ಹಾಕುವ ಮೂಲಕ ಅವಮಾನ ಮಾಡಿದ್ದಾರೆ. ಇದಕ್ಕೆ ಮೂಲ ಕಾರಣ ಮದರಸದಲ್ಲಿ ನೀಡುವ ಇಸ್ಲಾಮಿಕ್ ಮೂಲಭೂತವಾದ ಜಿಹಾದ್ ಶಿಕ್ಷಣ ಎಂದು ಹಿಂದು ಸಂಘಟನೆಗಳು ಹೇಳಿದ್ದಾರೆ. ಸದ್ಯ ಬಾಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Related posts

ಕಡಬ: ಮತ್ತೆ ಕಾಣಿಸಿಕೊಂಡ ಆನೆಗಳ ಹಿಂಡು, ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಮುನ್ಸೂಚನೆ

ಬೆಂಗಳೂರು ಕಂಬಳ ಕೂಟಕ್ಕೆ ಭರದ ಸಿದ್ಧತೆ; ಕರೆ ವೀಕ್ಷಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌

ಕೆವಿಜಿ ಮೆಡಿಕಲ್ ಕಾಲೇಜು-ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ನಂ.1 ಸೇವಾ ಪುರಸ್ಕಾರ