ಕ್ರೈಂರಾಜ್ಯವೈರಲ್ ನ್ಯೂಸ್

ಅಯ್ಯಪ್ಪ ಭಕ್ತರ ಮೇಲೆ ಹರಿದ ಕಾರು..! ಹಿಟ್ ಆ್ಯಂಡ್ ರನ್ ಘಟನೆಯಲ್ಲಿ ಓರ್ವ ಯುವತಿ ಸಾವು, 8 ಮಂದಿಗೆ ಗಂಭೀರ ಗಾಯ..!

ನ್ಯೂಸ್ ನಾಟೌಟ್: ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಅಯ್ಯಪ್ಪ ಭಕ್ತಾಧಿಗಳ ಮೇಲೆ ಕಾರು ಹರಿದಿದೆ. ದುರ್ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದಾಳೆ. 8 ಮಂದಿಗೆ ಗಂಭೀರ ಗಾಯವಾಗಿದೆ.

ಸಿದ್ಧಾಪುರದ ರವೀಂದ್ರ ನಗರ ಸರ್ಕಲ್ ಬಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಘಟನೆ ನಡೆದಿದೆ. ಸಿದ್ಧಾಪುರ ಕವಲಕೊಪ್ಪದ ದೀಪಾ ರಾಮಗೊಂಡ (21) ಸಾವಿಗೀಡಾದ ಯುವತಿ ಎಂದು ಗುರುತಿಸಲಾಗಿದೆ. ಕಲ್ಪನಾ, ಜಾನಕಿ, ಚೈತ್ರಾ, ಜ್ಯೋತಿ, ಮಾದೇವಿ, ಗೌರಿ, ರಾಮಪ್ಪ ಹಾಗೂ ಗಜಾನನ ಅವರಿಗೆ ಗಂಭೀರ ಗಾಯವಾಗಿದ್ದು, ಗಾಯಗೊಂಡವರಿಗೆ ಸಿದ್ಧಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಗಾಯಗೊಂಡವರ ಪೈಕಿ ಕಲ್ಪನಾ ನಾಯ್ಕ್ ಹಾಗೂ ಇನ್ನೋರ್ವ ಮಹಿಳೆಯನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಮಕರ ಸಂಕ್ರಮಣ ಹಿನ್ನೆಲೆ ಅಯ್ಯಪ್ಪ ಸ್ವಾಮಿ ಮಂದಿರದ ಜಾತ್ರೆಗೆ ನೂರಾರು ಮಂದಿ ಸೇರಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಭಕ್ತರ ಮೇಲೆ ರೋಶನ್ ಫೆರ್ನಾಂಡೀಸ್ ಕಾರು ಹರಿಸಿದ್ದಾನೆ ಎನ್ನಲಾಗಿದೆ. ಅತೀ ವೇಗದಲ್ಲಿ ತನ್ನ ಇಕೋ ಸ್ಪೋರ್ಟ್ ಕಾರನ್ನು ಒಟ್ಟಾರೆ ಚಲಾಯಿಸಿದ್ದ. ದೇವಸ್ಥಾನದ ಮಂಟಪಕ್ಕೆ ಢಿಕ್ಕಿ ಹೊಡೆದ ನಂತರ ಜನರ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದ. ಆಕ್ರೋಶಗೊಂಡ ಭಕ್ತಾಧಿಗಳಿಂದ ಆರೋಪಿಯ ಕಾರಿನ ಮೇಲೆ ಕಲ್ಲೆಸೆತ ಮಾಡಿದ್ದು, ಗಾಜು ಪುಡಿಪುಡಿ ಮಾಡಲಾಗಿದೆ. ಹರಸಾಹಸಪಟ್ಟು ಆರೋಪಿಯನ್ನು ಠಾಣೆಗೆ ಪೊಲೀಸರು ಎಳೆದೊಯ್ದಿದ್ದಾರೆ. ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ರೋಶನ್ ಫೆರ್ನಾಂಡೀಸ್ ವಿರುದ್ಧ ಪ್ರಕರಣ ದಾಖಲಾಗಿದೆ.

Click

https://newsnotout.com/2025/01/lakshmi-hebbalkar-kannada-news-doctor-kannada-news-d/
https://newsnotout.com/2025/01/udupi-kannada-news-malpe-jwellery-viral-news/
https://newsnotout.com/2025/01/kumbha-mela-nagasadhu-kannada-news-3-5-crore-people/
https://newsnotout.com/2025/01/tulu-cinema-rupesh-shetty-and-bollywood-actor-tulunadu/
https://newsnotout.com/2025/01/monkey-illness-kannada-news-132-people-issue-last-year/
https://newsnotout.com/2025/01/mahakumbha-mela-steve-jobs-wife-in-kumbh-mela-kannada-news-health/
https://newsnotout.com/2025/01/mahakumbha-mela-2025-and-muslim-man-arrested-for-suspect-kannada-news/

Related posts

ಮೃತದೇಹಗಳಿರುವ 45 ಚೀಲಗಳು ಪತ್ತೆ..! ಪೊಲೀಸರಿಗೆ ಕಾದಿತ್ತು ಅಚ್ಚರಿ!

ಅಮೆರಿಕದ ನಿವೃತ್ತ ಯೋಧನೇ ಈಗ ಶಂಕಿತ ಉಗ್ರ..!ಮಾನವ ಸಂಪನ್ಮೂಲ ತಜ್ಞ ಮತ್ತು ಐಟಿ ತಜ್ಞರಾಗಿ ಸೇನೆಯಲ್ಲಿ ಸೇವೆ..!

ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ: ಇಬ್ಬರನ್ನು ಬಂಧಿಸಿದ ಸುಳ್ಯ ಪೊಲೀಸರು