ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಅಯೋಧ್ಯೆ ರೈಲಿನೊಳಗೆ ನುಗ್ಗಿ ಬೆಂಕಿ ಹಚ್ಚುವುದಾಗಿ ಬೆದರಿಕೆ..! ಆ ಮೂವರು ಯುವಕರು ಯಾರು..?

ನ್ಯೂಸ್ ನಾಟೌಟ್ : ಅಯೋಧ್ಯೆಯಿಂದ ವಾಪಸಾಗುತ್ತಿದ್ದ ಯಾತ್ರಿಕರಿಗೆ ಅಯೋಧ್ಯೆ ವಿಶೇಷ ರೈಲಿಗೆ ನುಗ್ಗಿ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಗುರುವಾರ(ಫೆ.22 ರ ರಾತ್ರಿ) ಬಂಧಿಸಿದ್ದಾರೆ.

ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ಗದಗದ ಬಳಿ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಯಾತ್ರಿಕರಿದ್ದ ಬೋಗಿಗೆ ಮೂವರು ಯುವಕರು ಹತ್ತಿ ಅವರೊಂದಿಗೆ ಕಾರಣವಿಲ್ಲದೆ ವಾಗ್ವಾದಕ್ಕಿಳಿದ್ದರು. ಮಾತಿನ ಭರದಲ್ಲಿ ಕಿಡಗೇಡಿಗಳು ಬೋಗಿಗೆ ಬೆಂಕಿ ಹಚ್ಚುವುದಾಗಿ ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಹೊಸಪೇಟೆಯ ರೈಲ್ವೆ ನಿಲ್ದಾಣದಲ್ಲಿ ಮೂವರು ಯುವಕರ ಆಕ್ಷೇಪಾರ್ಹ ಹೇಳಿಕೆಯಿಂದ ಶ್ರೀರಾಮ ಭಕ್ತರು ಕೆರಳಿದ್ದಾರೆ. 8.15ಕ್ಕೆ ಹೊಸಪೇಟೆಗೆ ಬಂದ ರೈಲು, 10 ಗಂಟೆಗೆ ಬಳ್ಳಾರಿ ಕಡೆ ಪ್ರಯಾಣ ಬೆಳೆಸಿದೆ.

ಎರಡು ಗಂಟೆ ಕಾಲ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಅಯೋಧ್ಯೆ ಧಾಮ ರೈಲು ಮಾರ್ಗ ಮಧ್ಯೆ ನಿಂತಿದೆ. ಯುವಕರನ್ನು ಬಂಧಿಸುವಂತೆ ಪ್ರತಿಭಟಿಸಲಾಗಿದೆ. ಸ್ಥಳಕ್ಕೆ ವಿಜಯನಗರ ಎಸ್ಪಿ ಶ್ರೀಹರಿಬಾಬು, ಹೊಸಪೇಟೆಯ ಉಪವಿಭಾಗದ ಪೊಲೀಸ್ ಅಧಿಕಾರಿಗಳಿಂದ ಮನವೊಲಿಸಿದ್ದಾರೆ ಎಂದು ವರದಿ ತಿಳಿಸಿದೆ. ಹಿಂದೂಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಪ್ರಯತ್ನದಿಂದ ಕೊನೆಗೂ ರೈಲು ತೆರಳಿದೆ. ಮುಂಜಾಗ್ರತಾ ಕ್ರಮವಾಗಿ ರೈಲಿನೊಳಗೆ ರೈಲ್ವೆ ಪೊಲೀಸರು, ಸ್ಥಳೀಯ ಪೊಲೀಸರು ಬಳ್ಳಾರಿಯವರೆಗೆ ಸಂಚಾರ ಮಾಡಿದ್ದಾರೆ.

Related posts

ಚಿಕಿತ್ಸೆಗಾಗಿ ಲಂಡನ್‌ಗೆ ಹಾರಿದ ನಟಿ ರಮ್ಯಾ! ಅಷ್ಟಕ್ಕೂ ಮೋಹಕತಾರೆಗೆ ಏನಾಯ್ತು?

ದೇಶದ ಅತ್ಯಂತ ಚಿಕ್ಕ ಹೈಕೋರ್ಟ್​ನಲ್ಲಿ ದೊಡ್ಡ ನಿರ್ಧಾರ..! ಇನ್ಮುಂದೆ ಹೈಕೋರ್ಟ್​ನ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ

ಇಸ್ರೊದಿಂದ ಇಒಎಸ್–04 ಸೇರಿ ಮೂರು ಉಪಗ್ರಹಗಳ ಯಶಸ್ವಿ ಉಡಾವಣೆ