ಕ್ರೈಂಬೆಂಗಳೂರುವೈರಲ್ ನ್ಯೂಸ್

30ಕ್ಕೂ ಹೆಚ್ಚು ಆಟೋಗಳು ಬೆಂಕಿಗಾಹುತಿ..! ಆ ರಾತ್ರಿ ನಡೆದದ್ದಾದರೂ ಏನು..?

241

ನ್ಯೂಸ್ ನಾಟೌಟ್: ಆಟೋ ಶೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗುರುವಾರ(ಫೆ.23 ತಡರಾತ್ರಿ 30ಕ್ಕೂ ಹೆಚ್ಚು ಆಟೋಗಳು ಸುಟ್ಟು ಕರಕಲಾಗಿವೆ ಎಂದು ವರದಿ ತಿಳಿಸಿದೆ. ಬೆಂಗಳೂರಿನ ನಾಯಂಡಹಳ್ಳಿಯ ಗಂಗೊಂಡನಹಳ್ಳಿ ಸಮೀಪ ಅಗ್ನಿ ಅವಘಡ ಸಂಭವಿಸಿದೆ.

ರಜ್ವಾನ್ ಎಂಬುವವರಿಗೆ ಸೇರಿದ ಶೆಡ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಬೆಂಕಿ ನಂದಿಸಿದ್ದಾರೆ. ಶೆಡ್‌ನಲ್ಲಿ ಹೇಗೆ, ಯಾವ ಕಾರಣಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂಬುದು ನಿಗೂಢವಾಗಿದೆ.

ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ. ತಡರಾತ್ರಿ ಆಟೋಗಳು ಸುಟ್ಟು ಕರಕಲಾದ ಸುದ್ದಿ ತಿಳಿಯುತ್ತಿದ್ದಂತೆ ಆಟೋ ಚಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೊಟ್ಟೆಪಾಡಿಗಿದ್ದ ದುಡಿಮೆಗೆ ಆಧಾರವಾಗಿದ್ದ ಆಟೋವನ್ನು ಕಳೆದುಕೊಂಡಿದ್ದಕ್ಕೆ ದುಃಖಿಸಿದ್ದರು. ಮನೆ ಮುಂದೆ ಜಾಗ ಇಲ್ಲವೆಂದು ಆಟೋ ಚಾಲಕರು ಶುಲ್ಕ ಕೊಟ್ಟು ಶೆಡ್‌ನಲ್ಲಿ ಪಾರ್ಕ್‌ ಮಾಡುತ್ತಿದ್ದರು.

ಕಷ್ಟ ಪಟ್ಟು ದುಡೀತಾ ಇದೀವಿ ಹೀಗೆ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ. ಆಟೋ ನಿಲ್ಲಿಸಿ ಮನೆಗೆ ಹೋದಾಗ ಈ ಅವಘಡ ನಡೆದಿದೆ ಎನ್ನಲಾಗಿದೆ. ಕಳೆದ 10 ದಿನದ ಹಿಂದೆ ಶಾರ್ಟ್ ಸರ್ಕ್ಯೂಟ್‌ನಿಂದ ಪಕ್ಕದ ಗೋಡಾನ್‌ಗೆ ಬೆಂಕಿ ಬಿದ್ದಿತ್ತು. ಇದರ ಬಗ್ಗೆ ಬೆಸ್ಕಾಂ ಅವರ ಗಮನಕ್ಕೆ ತಂದರೂ ಏನು ಪ್ರಯೋಜನ ಆಗಿಲ್ಲ. ಈಗ ಆಟೋಗಳಿದ್ದ ಶೆಡ್‌ ಸುಟ್ಟು ಕರಕಲಾಗಿದೆ, ನಾವೆಲ್ಲರೂ ಬೀದಿಪಾಲಾಗಿದ್ದೇವೆ ಎಂದು ಆಟೋ ಚಾಲಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

See also  ಪಹಲ್ಗಾಮ್​ ದಾಳಿಯಿಂದಾಗಿ ಪಾಕ್ ಗೆ ಟೊಮೆಟೋ ರಫ್ತು ನಿಲ್ಲಿಸಿದ ಕರ್ನಾಟಕದ ರೈತರು..! ವಾರ್ಷಿಕವಾಗಿ 800 ರಿಂದ 900 ಟನ್ ಟೊಮೆಟೋ ಕೋಲಾರದಿಂದ ಪಾಕ್ ಗೆ ರಫ್ತು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget