ಕ್ರೈಂವೈರಲ್ ನ್ಯೂಸ್

ಆಟೋಗೆ ಬೆಂಕಿ ಹಚ್ಚಿದ್ದೇಕೆ ಹುಡುಗಿ ಕಡೆಯವರು..? ಪ್ರೇಮ ವಿವಾಹಕ್ಕೆ ಬಲಿಯಾಯ್ತ ಯುವಕನ ಬದುಕು?

256

ನ್ಯೂಸ್‌ ನಾಟೌಟ್‌: ಅಂತರ್ಜಾತಿಯ ಯುವಕ ಮತ್ತು ಯುವತಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ (Intercaste Marriage) ರೊಚ್ಚಿಗೆದ್ದ ಯುವತಿ ಕಡೆಯವರು ಯುವಕನ ಸಂಬಂಧಿಕರ ಆಟೋಗೆ (Auto) ಬೆಂಕಿ (Fire) ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮೇಲಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಯುವಕ ಮತ್ತು ಯುವತಿ ಒಂದೇ ಗ್ರಾಮದವರು ಎಂದು ತಿಳಿದುಬಂದಿದೆ.

ಗ್ರಾಮದ ಸುರೇಶ್ ಕುಮಾರ್ ಹಾಗೂ ಮೊನಿಕಾ ಎಂಬಿಬ್ಬರು ಪ್ರೀತಿಸಿ ಪರಾರಿಯಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಸುರೇಶ್ ಕುಮಾರ್ ಕಂಬಿ ಕೆಲಸ ಮಾಡುತ್ತಿದ್ದು, ಮೊನಿಕಾ ಪಿಯುಸಿ ಫೈಲ್ ಆಗಿ ಮನೆಯಲ್ಲೇ ಇದ್ದಳು ಎನ್ನಲಾಗಿದೆ.

ಎದುರು ಬದುರು ಮನೆಯಲ್ಲಿದ್ದ ಸುರೇಶ್ ಹಾಗೂ ಮೊನಿಕಾ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಈ ಹಿನ್ನೆಲೆ ಸುರೇಶ್ ಹಾಗೂ ಮೋನಿಕಾ ಹಿರಿಯರ ಒಪ್ಪಿಗೆಯಿಲ್ಲದೇ ಓಡಿಹೋಗಿ ಮದುವೆಯಾಗಿದ್ದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಹುಡುಗಿಯ ಪೋಷರು ಹುಡುಗನ ಸಂಬಂಧಿಕರಾದ ಮೋಹನ್ ಎಂಬುವವರಿಗೆ ಸೇರಿದ ಆಟೋಗೆ ಬೆಂಕಿ ಹಚ್ಚಿರುವುದಾಗಿ ಆರೋಪಿಸಲಾಗಿದೆ. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

See also  ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಿಧನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget