ದೇಶ-ವಿದೇಶವೈರಲ್ ನ್ಯೂಸ್

ಸಮುದ್ರ ತೀರದಲ್ಲಿ ವಿಚಿತ್ರ ಮತ್ತು ಅಪರೂಪದ ‘ಡೂಮ್ಸ್‌ ಡೇ ಫಿಶ್‌’ ಪತ್ತೆ..! ವಿರಳವಾಗಿ ಕಾಣಿಸೋ ಇವು ಬಂದಾಗಲೆಲ್ಲ ಭೂಕಂಪಗಳು ನಡೆದಿವೆ..!

ನ್ಯೂಸ್ ನಾಟೌಟ್ : ಡೂಮ್ಸ್‌ ಡೇ ಫಿಶ್ ಎಂದು ಕರೆಯಲ್ಪಡುವ ಅಪರೂಪದ ಸಮುದ್ರ ಪ್ರಾಣಿಯೊಂದು ಆಸ್ಟ್ರೇಲಿಯಾದ ಕರಾವಳಿಯಲ್ಲಿ ಕಾಣಿಸಿಕೊಂಡಿದೆ. ಇದನ್ನು ಒರಾ ಫಿಶ್ ಎಂದು ಕೂಡ ಕರೆಯುತ್ತಾರೆ. ಇದು ಕರಾವಳಿ ತೀರದಲ್ಲಿ ಕಾಣಲು ಸಿಗುವುದು ತೀರಾ ಅಪರೂಪ ಆದರೂ ಆಸ್ಟ್ರೇಲಿಯಾದ ತಿವಿ ದ್ವೀಪದ ಸಮುದ್ರ ಸಾಹಸಿಯಾದ ಕರ್ಟಿಸ್ ಫಿಟರ್‌ಸನ್ ಅವರಿಗೆ ಈ ಒರಾ ಫಿಶ್‌ ಕಾಣಲು ಸಿಕ್ಕಿದೆ. ಅವರು ಅದನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮೇಲ್ಮೈನಿಂದ ನೋಡಿದಾಗ ಹಾವುಗಳಂತೆ ಕಾಣಿಸುತ್ತವೆ. 1901ರಿಂದಲೂ ಈ ಒರಾ ಫಿಶ್ ಕೇವಲ 20 ಬಾರಿ ಮಾತ್ರ ಕಾಣಲು ಸಿಕ್ಕಿದೆ ಎಂದು ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿರುವ ಸಮುದ್ರಶಾಸ್ತ್ರ ಸಂಸ್ಥೆಯೂ ಹೇಳಿದೆ.

ಅಮೆರಿಕಾದ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಇದು ಕೇವಲ 12 ಫೀಟ್ ಎಂದರೆ 3.7 ಮೀಟರ್ ಉದ್ದವನ್ನು ಹೊಂದಿತ್ತು. ಇದನ್ನು ಇಂದಿಗೂ ಆಕರ್ಷಕ ಅನ್ವೇಷಣೆ ಎಂದೇ ಪರಿಗಣಿಸಲಾಗುತ್ತದೆ.

ಈ ಅಪರೂಪದ ಸಮುದ್ರ ಜೀವಿ ಕಾಣಿಸಿಕೊಂಡಾಗಲೆಲ್ಲಾ ಅಲ್ಲಿ ಎಲ್ಲಾದರೂ ಏನಾದರೊಂದು ಪ್ರಾಕೃತಿಕ ವಿಕೋಪದಂತಹ ಕೆಟ್ಟ ಅನಾಹುತ ಸಂಭವಿಸಿದ ಬಗ್ಗೆ ಅಧ್ಯಯನ ತಿಳಿಸಿದೆ. ಹೀಗಾಗಿ ಈ ಸಮುದ್ರ ಜೀವಿ ಭೂಕಂಪನ ಅಥವಾ ಇನ್ಯಾವುದೋ ಇದೇ ರೀತಿಯ ಅನಾಹುತದ ಎಚ್ಚರಿಕೆ ನೀಡುತ್ತದೆ ಎನ್ನಲಾಗಿದೆ. ಸಮುದ್ರ ತಳಭಾಗದಲ್ಲಿ ವಾಸಿಸುವ ಇವುಗಳು ಅಲ್ಲಿನ ಅಸಹಜ ಕಂಪನಗಳು ಕಾರಣವಾಗಿರಬಹುದು ಎನ್ನಲಾಗಿದೆ.

ಜಪಾನಿನ ಜಾನಪದವು ಈ ಸಮುದ್ರ ಜೀವಿಯನ್ನು ದುರಂತದ ಮುನ್ಸೂಚನೆ ಎಂದು ಕರೆಯುತ್ತದೆ. ಈ ಹಿಂದೆಯೂ ಕ್ಯಾಲಿಫೋರ್ನಿಯಾದಲ್ಲೂ ಈ ಮೀನು ಕಾಣಿಸಿಕೊಂಡ ಎರಡು ದಿನಗಳ ನಂತರ ಅಲ್ಲಿ ಭೂಕಂಪನ ಸಂಭವಿಸಿತ್ತು.

Click

https://newsnotout.com/2024/09/haleneranky-ambulance-collison-at-mangaluru-kannada-news/
https://newsnotout.com/2024/09/donkey-sold-to-farmers-and-issued-company-cid-investigation-kannada-news/
https://newsnotout.com/2024/09/live-missile-attack-kannada-news-viral-video-isrel-and-conflict/
https://newsnotout.com/2024/09/swami-narayan-mandhir-america-anti-hindu-writing-kannada-news/

Related posts

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 21ನೇ ಆರೋಪಿ ಅರೆಸ್ಟ್..! ಪ್ರಮುಖ ಕೊಲೆ ಆರೋಪಿಯನ್ನು ಚೆನ್ನೈಗೆ ಕಳುಹಿಸಿ ಪರಾರಿಯಾಗಲು ನೆರವು ನೀಡಿದ್ದವನ ಬಂಧನ..!

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ..! ಆತ ತಾನು ಪೊಲೀಸ್ ಎಂದು ಹೇಳಿಕೊಂಡದ್ದೇಕೆ..?

ಹಿಂದೂಗಳನ್ನು ಮತಾಂತರ ಮಾಡುತ್ತಿವೆಯಾ ಕ್ರಿಶ್ಚಿಯನ್‌ ಪ್ರಾರ್ಥನಾ ಮಂದಿರಗಳು? ಸ್ಥಳೀಯರಿಂದ ಪ್ರಾರ್ಥನಾ ಮಂದಿರಕ್ಕೆ ಮುತ್ತಿಗೆ..! ಮುಂದೇನಾಯ್ತು?