ಕರಾವಳಿಬೆಂಗಳೂರು

ಪತಿ ದುಬೈಗೆ ಹೋಗಿದ್ದಾನೆಂದು ಹೇಳಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ಹನಿಟ್ರ್ಯಾಪ್ ಮಾಡಿದ ಆಂಟಿ..! ಆಂಟಿ ಅಂಡ್‌ ಗ್ಯಾಂಗ್‌ ಗೆ ಸ್ವರ್ಗ ತೋರಿಸಿದ ಪೊಲೀಸರು..!

202

ನ್ಯೂಸ್ ನಾಟೌಟ್: ತಮ್ಮ ಪತಿ ದುಬೈನಲ್ಲಿದ್ದಾನೆ. ಮನೆಯಲ್ಲಿ ಯಾರೂ ಇಲ್ಲ, ಲೈಂಗಿಕ ಕ್ರಿಯೆಗೆ ಬನ್ನಿ ಎಂದು ವ್ಯಕ್ತಿಯನ್ನು ಆಹ್ವಾನಿಸಿ ಬಳಿಕ ಹನಿಟ್ರ್ಯಾಪ್ ಮಾಡಿದ ಆಂಟಿಯನ್ನು ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆಂಟಿ ಅಂಡ್‌ ಗ್ಯಾಂಗ್ ಪೊಲೀಸರ ಅತಿಥಿಯಾಗಿದ್ದಾರೆ.


ಇತ್ತೀಚೆಗೆ ಡೇಟಿಂಗ್‌ ಆಪ್‌ ಮೂಲಕ ವ್ಯಕ್ತಿಗೆ ಮೆಹರಾ ಎಂಬ ಹೆಸರಿನ ಮಹಿಳೆಯ ಪರಿಯವಾಗಿದೆ. ಪರಸ್ಪರ ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಬಳಿಕ ಇಬ್ಬರ ನಡುವೆ ವಾಟ್ಸ್‌ಅಪ್ ಚಾಟ್ ಶುರುವಾಗಿದೆ. ನನ್ನ ಗಂಡ ದುಬೈನಲ್ಲಿದ್ದಾನೆ. ನಾನು ಸೆಕ್ಸ್‌ಗಾಗಿ ಸಂಗಾತಿ ಹುಡುಕುತ್ತಿದ್ದೇನೆ ಎಂದಿದ್ದಾಳೆ. ಈ ಮಾತಿನಿಂದ ವಿಶ್ವಾಸಗೊಂಡ ಸಂತ್ರಸ್ತ ಯುವಕ ಆಂಟಿ ಜತೆ ಲೈಂಗಿಕ ಕ್ರಿಯೆ ನಡೆಸಲು ಇಚ್ಛೆ ವ್ಯಕ್ತಪಡಿಸಿದ್ದಾನೆ. ಆಕೆ ಸಮ್ಮತಿಸಿದ್ದಾಳೆ. ಆತನನ್ನು ಜೆಪಿ ನಗರದ ೫ನೇ ಹಂತದ ಮನೆಗೆ ಕರೆಸಿಕೊಳ್ಳುತ್ತಾಳೆ. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮೂವರು ಸಂತ್ರಸ್ತ ವ್ಯಕ್ತಿಯನ್ನು ಹಿಡಿದು ಚೆನ್ನಾಗಿ ಥಳಿಸುತ್ತಾರೆ. ಮಾತ್ರವಲ್ಲ ಈ ವಿಚಾರವನ್ನು ಹೊರಗಿನವರಿಗೆ ತಿಳಿಸಿದ್ರೆ ಮೆಹರಾ ಜತೆ ನಿನಗೆ ಮದುವೆ ಮಾಡಿಸುತ್ತೇವೆ. ನೀನು ೩ ಲಕ್ಷರೂ. ಕೂಡಬೇಕು ಎಂದು ಬೆದರಿಕೆ ಹಾಕುತ್ತಾರೆ. ನಂತರ ೨೩ ಸಾವಿರ ರೂ. ಕಿತ್ತುಕೊಂಡು ಕಳಿಸಿದ್ದಾರೆ ಎಂದು ಸಂತ್ರಸ್ತ ಪೊಲೀಸರಿಗೆ ಸಂತ್ರಸ್ತ ವಿವರಿಸಿದ್ದಾನೆ.

See also  ಕೇರಳದಲ್ಲಿ ಮೆದುಳನ್ನೇ ತಿನ್ನುವ ಅಪರೂಪದ ಅಮೀಬಾ ಸೋಂಕು ಪತ್ತೆ..! ದ.ಕ ಜಿಲ್ಲೆಯಲ್ಲಿ ಹೈ ಅಲರ್ಟ್..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget