Uncategorized

ಅಪ್ಪನ ಧ್ವನಿ ಕೇಳುತ್ತಿದ್ದಂತೆ ಬಿಕ್ಕಿ-ಬಿಕ್ಕಿ ಅತ್ತ ಡ್ರೋಣ್ ಪ್ರತಾಪ್..! ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಕೋಡಿ,3 ವರ್ಷದಿಂದ ಮನೆಯವರಿಂದ ಪ್ರತಾಪ್ ದೂರವಾಗಿದ್ದೇಕೆ..?

ನ್ಯೂಸ್ ನಾಟೌಟ್: ಜೀವನದಲ್ಲಿ ಪ್ರತಿಯೊಬ್ಬರು ಕೂಡ ತಪ್ಪು ಮಾಡ್ತಾರೆ. ತಪ್ಪು ಮಾಡದೆ ಇರುವವನು ಮನುಷ್ಯನೇ ಅಲ್ಲ. ಆದರೆ ಮಾಡಿದ ತಪ್ಪನ್ನು ಮತ್ತೆ ಮಾಡಬಾರದು ಅಷ್ಟೆ. ಡ್ರೋಣ್ ಪ್ರತಾಪ್ ಸುಳ್ಳು ಹೇಳಿದ್ದಾರೆ. ಜನರಿಗೆ ವಂಚಿಸಿದ್ದಾರೆ ಅನ್ನೋ ವಿಚಾರ ಭಾರಿ ಚರ್ಚೆಯಾಗಿತ್ತು. ಅದೇ ಡ್ರೋಣ್ ಪ್ರತಾಪ್ ಈಗ ಬಿಗ್ ಬಾಸ್ ಮನೆಯಲ್ಲಿದ್ದಾರೆ. ವಾರದ ಪಂಚಾಯಿತಿ ಕಿಚ್ಚ ಸುದೀಪ್ ಜೊತೆಗಿನ ಮಾತಿನ ವೇಳೆ ತಂದೆಯ ಧ್ವನಿ ಕೇಳಿ ಪ್ರತಾಪ್ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಹೌದು, ಪ್ರತಾಪ್‌ ಅವರ ತಂದೆಯವರಿಗೆ ಕರೆ ಮಾಡುವ ಮೂಲಕ ಬಿಗ್‌ಬಾಸ್‌ ಸರ್ಪ್ರೈಸ್ ನೀಡಿದ್ದಾರೆ. ಪ್ರತಾಪ್‌ ಅವರು ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ಕುಟುಂಬದವರ ಬಗ್ಗೆ ಮಾತನಾಡಿರುವುದು ಬಹಳ ಕಡಿಮೆಯೇ, ಅಲ್ಲದೆ, ಅವರು ತಮ್ಮ ಕುಟುಂಬದವರೊಂದಿಗೆ ಮೂರು ವರ್ಷಗಳಿಂದ ಮಾತನಾಡುವುದನ್ನು ಬಿಟ್ಟಿರುವುದಾಗಿ ಹೇಳಿಕೊಂಡಿದ್ದರು. ಕಳೆದ ವಾರ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರು ಬರೆದ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಇದಕ್ಕಾಗಿ ಬಿಗ್‌ಬಾಸ್‌ ಒಂದು ಟಾಸ್ಕ್‌ ಅನ್ನು ನೀಡಿದ್ದರು. ಇದರನ್ವಯ ಬಿಗ್‌ಬಾಸ್‌ ಮನೆಯ ಕುರಿತಾಗಿ ಪ್ರಶ್ನೆಗಳನ್ನು ಕೇಳಲಾಯಿತು. ಆದರೆ, ಟಾಸ್ಕ್ ನಲ್ಲಿ ಪ್ರತಾಪ್‌ ವಿಫಲರಾದರು. ಈಗ ವೀಕೆಂಡ್ ನಲ್ಲಿ ‘ಕಿಚ್ಚನ ಪಂಚಾಯಿತಿಯಲ್ಲಿ’ ಸುದೀಪ್‌ ಅವರು, ‘ನಿಮ್ಮ ಮನೆಯಿಂದ ಬರುತ್ತಿದ್ದ ಪತ್ರದಲ್ಲಿ ನೀವು ಏನು ನಿರೀಕ್ಷಿಸಿದ್ದೀರಿ? ಎಂದು ಪ್ರತಾಪ್‌ ಅವರನ್ನು ಕೇಳಿದ್ದಾರೆ. ಅದಕ್ಕೆ ಉತ್ತರಿಸುವ ಮೊದಲೇ ಮನೆಯೊಳಗೆ ಪ್ರತಾಪ್‌ ಅವರ ತಂದೆಯ ಧ್ವನಿ ಕೇಳಿದೆ. ಫೋನ್‌ನಲ್ಲಿ ತಂದೆಯ ಧ್ವನಿಯನ್ನು ಕೇಳಿದ ಪ್ರತಾಪ್‌, ‘ಅಪ್ಪಾ ನನ್ನ ಕ್ಷಮಿಸಿಬಿಡಿ. ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೀನಿ’ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Related posts

ಅತಿಥಿ ಉಪನ್ಯಾಸಕರಿಗೆ ಶೀಘ್ರ ಸಿಹಿಸುದ್ದಿ

ಝೀ ಕನ್ನಡ ಯುವರತ್ನ ಪ್ರಶಸ್ತಿ;35 ಸಾಧಕರಿಗೆ ಸಮ್ಮಾನ;ಸುಳ್ಯದ ಗೀತಾ ಗುಡ್ಡೆಮನೆಯವರಿಗೆ ಪ್ರಶಸ್ತಿ ನೀಡಿ ಗೌರವ

ಬೆಂಗಳೂರಿಗೆ ಬರುತ್ತಿದ್ದ ವಿಮಾನದೊಳಗೆ ಹೊಗೆಬಿಟ್ಟು ಮಹಿಳೆಯ ಕಿತಾಪತಿ..!