ಕ್ರೈಂಬೆಂಗಳೂರುರಾಜಕೀಯ

ಶಾಸಕ ಮುನಿರತ್ನ ಅವರ ಇನ್ನೂ 2 ಆಡಿಯೋಗಳು ನಾಳೆ ರಿಲೀಸ್..? ಗುತ್ತಿಗೆದಾರನಿಂದ ಸ್ಫೋಟಕ ಹೇಳಿಕೆ..!

ನ್ಯೂಸ್ ನಾಟೌಟ್: ಕಾಂಟ್ರ್ಯಾಕ್ಟರ್ ಹಾಗೂ ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿ, ಜಾತಿ ನಿಂದನೆ ಮತ್ತು ಬೆದರಿಕೆ ಕೇಸ್ ನಲ್ಲಿ ಶಾಸಕ ಈಗಾಗಲೇ ಅರೆಸ್ಟ್ ಆಗಿದ್ದಾರೆ.
ಇದೆಲ್ಲದರ ಮಧ್ಯೆ ಮುನಿರತ್ನ ಅವರ ಕುರಿತ ಇನ್ನೂ ಎರಡು ಆಡಿಯೋಗಳು ಇವೆ. ನಾಳೆ(ಸೆ.17) ರಿಲೀಸ್ ಮಾಡುತ್ತೇನೆ ಎಂದು ಗುತ್ತಿಗೆದಾರ ಚಲುವರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರಾಜರಾಜೇಶ್ವರಿನಗರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ ಜತೆ ಮಾತಾಡಿದ ಆಡಿಯೋ ಹಾಗೂ 30% ಕಮಿಷನ್​ ವಿಚಾರದ ಆಡಿಯೋ ಬಿಡುಗಡೆ ಮಾಡುತ್ತೇನೆ. ನಾಳೆ 2 ಆಡಿಯೋ ರಿಲೀಸ್​ ಮಾಡುತ್ತೇನೆ ಎಂದಿದ್ದಾರೆ.
ಅವರು ಗಲಾಟೆ ಸೃಷ್ಟಿಸಿ ವೇಲು ನಾಯಕ್ ಮೇಲೆ ಆರೋಪ ಹೊರಿಸಲು ಹನುಮಂತನರಾಯಪ್ಪ ಮೂಲಕ ವಿಷಯಾಂತರಕ್ಕೆ ಕುತಂತ್ರ ಮಾಡಲಾಗಿದೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದಾರೆ. ಬೆಳಗ್ಗೆ ನನ್ನನ್ನು ಕರೆದು ನ್ಯಾಯ ಕೊಡಿಸುತ್ತೇನೆ ಅಂದರು. ಬಳಿಕ ಹಣಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ನಾನು ಈಗಾಗಲೇ ಉತ್ತರವನ್ನು ಕೊಟ್ಟಿದ್ದೇನೆ ಎಂದಿದ್ದಾರೆ.

ಹನುಮಂತರಾಯಪ್ಪರ ಜತೆ ಮಾತಾಡಿರೋದು ಸತ್ಯ. ಶಾಸಕನನ್ನು ಬೈಯುವುದಕ್ಕೆ ಆಗುತ್ತಾ. 3 ವರ್ಷದಿಂದ ಎಷ್ಟು ಕಷ್ಟ ಪಟ್ಟಿದ್ದೇನೆ ನನಗೆ ಗೊತ್ತಿದೆ. ಇದು ಒಂದು ತಿಂಗಳ ಹಿಂದೆ ನಡೆದಿರುವ ಪ್ರಕರಣ. ರೇಣುಕಾಸ್ವಾಮಿ ಹೊಡೆದು ಹಾಕಿದ್ದು ಯಾರು ಗೊತ್ತಾ? ರೇಣುಕಾಸ್ವಾಮಿ ಹೊಡೆದಾಕಿದ್ದು ನನ್ನ ತಂಗಿ ಮಗ ಎಂದು ಮುನಿರತ್ನ ಅಂದಿದ್ದರು. ಅವತ್ತೇ ನಾನು ಲೋಕಾಯುಕ್ತಕ್ಕೆ ಕಂಪ್ಲೆಂಟ್ ಕೊಟ್ಟಿದ್ದೆ ಎಂದು ಗುತ್ತಿಗೆದಾರ ಹೇಳಿಕೆ ನೀಡಿದ್ದಾರೆ.

Click

https://newsnotout.com/2024/09/bc-road-bike-rally-police-and-hindu-leaders-oppose-kananda-news/
https://newsnotout.com/2024/09/mangaluru-masjid-issue-vhp-protest-in-bc-road-kannada-news/
https://newsnotout.com/2024/09/darshan-thugudeepa-in-ballary-and-secrete-latter-to-him-from-lawyer/
https://newsnotout.com/2024/09/palestain-flag-in-chikkamagaluru-minor-boys-are-under-police-custody-kannada-news/
https://newsnotout.com/2024/09/talakavery-thirtha-udbhava-kananda-news-muhurtha-kannada-news/
https://newsnotout.com/2024/09/reels-crazy-kannada-news-viral-video-police-arrest-the-man-who-create-sence-in-public/

Related posts

ಮೋದಿ ವಿರುದ್ಧ ಚುನಾವಣೆಯಲ್ಲಿ ತೃತೀಯ ಲಿಂಗಿ ಸ್ಪರ್ಧೆ..! ಅಖಿಲ ಭಾರತ ಹಿಂದೂ ಮಹಾಸಭಾದಿಂದ ಟಿಕೆಟ್ ಘೋಷಣೆ

ಮಾತನಾಡಲು ಹಾಸ್ಟೆಲ್ ಬಳಿ ಕರೆಸಿಕೊಂಡು ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ..! ಬೆದರಿಕೆ ಹಾಕಿದ ಬಗ್ಗೆ ದೂರಿನಲ್ಲಿ ಉಲ್ಲೇಖ

ಪುಷ್ಪಾ ಸಿನಿಮಾನೇ ಇವರಿಗೆ ಸ್ಪೂರ್ತಿ..! ಪುಷ್ಪಾ ಸಿನಿಮಾದಲ್ಲಿ ಹಾಲು ಪೂರೈಸುವ ಟ್ಯಾಂಕರ್‌ನಲ್ಲಿ ರಕ್ತ ಚಂದನ ಸಾಗಾಟ ಮಾಡಿದಂತೆ ಈ ಗ್ಯಾಂಗ್ ಮದ್ಯ ಸಾಗಾಟ ಮಾಡಿದ ರೀತಿಯೇ ರೋಚಕ!