ಕ್ರೈಂಬೆಂಗಳೂರು

ನಗ್ನವಾಗಿ ಕಾಣುವ ನಕಲಿ ಕನ್ನಡಕ ಮಾರಾಟ ಯತ್ನ; ನಾಲ್ವರ ಬಂಧನ

372

ನ್ಯೂಸ್‌ ನಾಟೌಟ್‌: ಮುಂದೆ ನಿಂತಿರುವವರನ್ನು ನಗ್ನವಾಗಿ ಕಾಣುವಂತೆ ಮಾಡುವ ನಕಲಿ ಕನ್ನಡಕ ಮಾರಾಟ ಮಾಡಲು ಪ್ರಯತ್ನಿಸಿದ್ದ ಬೆಂಗಳೂರು ಮೂಲದ ನಾಲ್ವರು ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರಿನ ನಿವಾಸಿಗಳಾದ ಶಿವ ಅಲಿಯಾಸ್ ಸೂರ್ಯ (39), ಕುಗೈಪ್ (37), ಜಿತು (24) ಮತ್ತು ಇರ್ಷಾದ್ (21) ಎಂದು ಗುರುತಿಸಲಾಗಿದೆ. ಈ ನಾಲ್ವರು ಕಿರಾತಕರು, ನಕಲಿ ಕನ್ನಡಕದಿಂದ ಎದುರಿಗಿರುವವರು ನಗ್ನವಾಗಿ ಕಾಣುತ್ತಾರೆ ಎಂದು ನಂಬಿಸಿ ದೊಡ್ಡ ಮೊತ್ತದ ಹಣಕ್ಕೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ನಗ್ನವಾಗಿ ಕಾಣುವ ನಕಲಿ ಕನ್ನಡಕ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಎಂಬಿಟಿ ಪೊಲೀಸರು ಕೋಯಂಬೇಡು ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ನಾಲ್ವರು ಆರೋಪಿಗಳು ರೈಸ್ ಪುಲ್ಲಿಂಗ್ ಮಾಡುವ ಪುರಾತನ ಕಾಲದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುವನ್ನು ಕೊಡುವುದಾಗಿ ನಂಬಿಸಿ ಜನರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ ಎಂಬ ಆರೋಪವೂ ಇದೆ. ಅಲ್ಲದೇ ತಮ್ಮ ಎದುರಿಗಿರುವವರನ್ನು ಬೆತ್ತಲೆಯಾಗಿ ಕಾಣಲು ಸಹಾಯ ಮಾಡುವ ಕನ್ನಡಕ ಮಾರಾಟ ಮಾಡುವ ನೆಪದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಇನ್ನು ದುಬಾರಿ ಹಣ ಕೊಟ್ಟು ಕನ್ನಡಕ ಖರೀದಿಸಿದ ಜನರು ಎದುರಿಗಿರುವವರು ನಗ್ನವಾಗಿ ಕಾಣದಿರುವುದನ್ನು ಪ್ರಶ್ನಿಸಿದರೆ ನಕಲಿ ಪಿಸ್ತೂಲ್‌ನಿಂದ ಬೆದರಿಸಿ ಹಣವನ್ನೂ ದೋಚಿದ್ದಾರೆ ಎಂದು ತಿಳಿದು ಬಂದಿದೆ. ಈ ಆರೋಪಿಗಳು ಇನ್ನೆಷ್ಟು ಜನರಿಗೆ ಮೋಸ ಮಾಡಿದ್ದಾರೆ. ಎಂಬುವುದು ತನಿಖೆಯಿಂದ ತಿಳಿದು ಬರಲಿದೆ.

See also  ದಯಾಮರಣ ಕೋರಿ ರಾಷ್ಟ್ರಪತಿ ಮತ್ತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಪೊಲೀಸ್! ಆ ಪತ್ರದಲ್ಲೇನಿದೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget