ಕರಾವಳಿಸುಳ್ಯ

ಬಳ್ಪ:ಮಗುಮಲಗಿದೆ ಸ್ವಲ್ಪ ಮೆತ್ತಗೆ ಮಾತಾಡಿ ಎಂದಿದ್ದಕ್ಕೆ ವ್ಯಕ್ತಿಯಿಂದ ಹಲ್ಲೆ;ಮಗುವಿನ ತಂದೆಗೆ ಕತ್ತಿಯಿಂದ ಹಲ್ಲೆ ಮಾಡಿದ ಆ ವ್ಯಕ್ತಿ ಯಾರು?

204

ನ್ಯೂಸ್‌ ನಾಟೌಟ್‌ : ಚಿಕ್ಕ ಮಗು ಮನೆಯೊಳಗಿದ್ದರೆ ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ಹೇಳೋದು ಸಾಮಾನ್ಯ.ಅದು ಮನೆಯವರಿಗಿರಲಿ, ಹೊರಗಡೆಯವರು ಮನೆಗೆ ಕಡೆ ಬಂದಾಗಲೋ ಈ ಮಾತನ್ನು ಹೇಳಿಯೇ ಹೇಳುತ್ತಾರೆ.ಹೀಗೆ ಹೇಳಿದ್ದಕ್ಕೆ ವ್ಯಕ್ತಿಯೋರ್ವ ಕತ್ತಿಯಿಂದ ಹಲ್ಲೆಯೇ ಮಾಡಿಬಿಟ್ಟ ಬಿಟ್ಟ ಘಟನೆಯೊಂದು ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಳ್ಪ ನಿವಾಸಿ ರಮೇಶ್‌ ಕೆ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ. ಸುಂದರ ಹೊಸ್ಮಠ ಎಂಬುವವರೇ ಆರೋಪಿ.ರಮೇಶ್‌ ಅವರು ತಮ್ಮ ಹೆಂಡತಿ ಮತ್ತು ಸಣ್ಣ ಮಗುವಿನೊಂದಿಗೆ ಬಳ್ಪದ ಮನೆಯೊಮದರಲ್ಲಿ ವಾಸವಾಗಿದ್ದರು. ಮಾ.26 ರಂದು ಸಂಜೆ ಮನೆಯಲ್ಲಿರುವಾಗ ಅವರ ಸಂಬಂಧಿಕರಾದ ಸುಂದರ ಹೊಸ್ಮಠ ಮನೆಗೆ ಬಂದು ಕುಳಿತು ಜೋರಾಗಿ ಮಾತನಾಡುತ್ತಿದ್ದರು. ಈ ವೇಳೆ ರಮೇಶ್‌ ಅವರು ಸಣ್ಣ ಮಗು ಮಲಗಿದೆ, ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಸುಂದರ ಅವರು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಕುರಿತು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಲಂಚ ಪಡೆದಿದ್ದ ಮಹಾನಗರ ಪಾಲಿಕೆ ಅಧಿಕಾರಿಗೆ 5 ವರ್ಷ ಜೈಲು, 35 ಲಕ್ಷ ರೂ. ದಂಡ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget