Latestದೇಶ-ವಿದೇಶ

ಇನ್ನು ಮುಂದೆ ಚಲಿಸುವ ಟ್ರೈನ್​ ನಲ್ಲೂ ಹಣ ಡ್ರಾ ಮಾಡಬಹುದು..! ರೈಲ್ವೆ ಇಲಾಖೆಯಿಂದ ಹೊಸ ಪ್ರಯೋಗ..!

621

ನ್ಯೂಸ್ ನಾಟೌಟ್: ಭಾರತೀಯ ರೈಲ್ವೆ ಇಲಾಖೆಯೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ಹೊಸ ಪ್ರಯೋಗ ಮಾಡುತ್ತಿರುತ್ತದೆ. ಅದರಂತೆ ಇದೀಗ ಚಲಿಸುವ ರೈಲಿನಲ್ಲಿ ಎಟಿಎಂ ಇರಿಸಿ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಸಕ್ಸಸ್​ ಆಗಿದೆ ಎನ್ನಲಾಗಿದೆ.

ಇಷ್ಟು ದಿನ ರಸ್ತೆಗಳ ಬದಿಯಲ್ಲಿ ಇರುವ ಎಟಿಎಂಗಳಲ್ಲಿ ಜನರು ಹಣ ತೆಗೆದುಕೊಳ್ಳುತ್ತಿದ್ದರು. ಇನ್ನು ಮೇಲೆ ಟ್ರ್ಯಾಕ್​ ಮೇಲೆ ಚಲಿಸುವ ಟ್ರೈನ್ ​ನಲ್ಲೂ ಎಟಿಎಂಗಳಿಂದ ಹಣ ಡ್ರಾ ಮಾಡಬಹುದು. ಇಂತಹದೊಂದು ವಿನೂತನ ಕಾರ್ಯವನ್ನು ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಪರಿಚಯಿಸಿದೆ.

ರೈಲ್ವೆಯ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ನಡುವಿನ ಸಹಭಾಗಿತ್ವದಲ್ಲಿ ಮುಂಬೈಯಿಂದ ನಾಸಿಕ್ ​ನ ಮನ್ಮಾಡ್ ​ವರೆಗೆ ಸಂಚಾರ ಮಾಡುವ ಪಂಚವಟಿ ಎಕ್ಸ್‌ ಪ್ರೆಸ್‌ ರೈಲ್ವೆಯ ಎಸಿ ಕೋಚ್‌ ನ ಒಳಗೆ ಎಟಿಎಂ ಇರಿಸಲಾಗಿದೆ. ಪ್ರಯಾಣಿಸುವ ಸಮಯದಲ್ಲಿ ಹಣದ ಅವಶ್ಯಕತೆ ಇದ್ದರೇ ಪ್ರಯಾಣಿಕರು ಹಣ ಡ್ರಾ ಮಾಡಿಕೊಳ್ಳಬಹುದು. ಇದನ್ನು INFRIS (Innovative and Non-Fare Revenue Ideas Scheme) ಯೋಜನೆಯ ಅಡಿ ರೈಲಿನಲ್ಲಿ ಪರಿಚಯಿಸಲಾಗಿದೆ.

ಪಂಚವಟಿ ಎಕ್ಸ್‌ಪ್ರೆಸ್‌ ರೈಲಿನ ಎಲ್ಲ 22 ಕೋಚ್‌ಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. ಹೀಗಾಗಿ ಎಲ್ಲ ಬೋಗಿಗಳಲ್ಲಿ ಇರುವ ಪ್ರಯಾಣಿಕರು ಎಟಿಎಂ ಅನ್ನು ಬಳಸಬಹುದು ಎನ್ನಲಾಗಿದೆ. ಇದೊಂದು ರೈಲ್ವೆಯ ಉತ್ತಮವಾದ ಯೋಜನೆ ಆಗಿದೆ ಎಂದು ಹೇಳಬಹುದು.

ಮಲ್ಪೆ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ ಕೇಸ್ ನಲ್ಲಿ ತಾಯಿ ತಪ್ಪೊಪ್ಪಿಗೆ..! ಆಸ್ಪತ್ರೆಗೆ ದಾಖಲು..!

ಡ್ರಗ್ಸ್ ಅಡಿಕ್ಟ್ ಆಗಿದ್ದ ಸ್ಟಾರ್‌ ನಟನಿಂದ ಕಿರುಕುಳ ಆರೋಪ..! ಮಲಯಾಳಂ ನಟಿ ಶಾಕಿಂಗ್ ಹೇಳಿಕೆ..!

ವಕ್ಫ್ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ 73 ಅರ್ಜಿಗಳ ವಿಚಾರಣೆ..! ಹಿಂದೂ ಟ್ರಸ್ಟ್ ​ನಲ್ಲಿ ಮುಸ್ಲಿಮರಿಗೆ ಅವಕಾಶ ನೀಡಲು ಸಿದ್ಧರಿದ್ದೀರಾ ಎಂದು ಕೇಳಿದ ಸುಪ್ರಿಂ ಕೋರ್ಟ್..!

See also  ನಟ ದರ್ಶನ್ ಗೆ ನೀಡಿದ್ದ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ..! ಪವಿತ್ರಾ ಗೌಡ ದರ್ಶನ್ ಪತ್ನಿಯೇ ಎಂದು ಕೇಳಿದ ಸುಪ್ರಿಂ ಕೋರ್ಟ್..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget