ಕ್ರೈಂ

ಎಟಿಎಮ್ ಗೆ ಕನ್ನ ಹಾಕಲೆತ್ನಿಸಿ ಕಂಬಿ ಎಣಿಸಿದ ಕಳ್ಳ..!

ಮಂಗಳೂರು: ಎಟಿಎಮ್ ಒಡೆದು ಕಳವುಗೈಯ್ಯಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ವ್ಯಕ್ತಿಯನ್ನು ಕೊಪ್ಪಳ ಮೂಲದ ಬಾಚನಳ್ಳಿ ನಿವಾಸಿ ಬೀರಪ್ಪ ಎಂದು ಗುರುತಿಸಲಾಗಿದೆ.

ಏನಿದು ಘಟನೆ?

ಕಳೆದ ರಾತ್ರಿ 2 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ತೊಕ್ಕೊಟ್ಟಿನಲ್ಲಿರುವ ಬ್ಯಾಂಕ್ ಆಫ್ ಬರೋಡ ಎಟಿಎಮ್ ಗೆ ಬಂದಿದ್ದು, ಎಟಿಎಮ್ ಒಡೆಯಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಬ್ಯಾಂಕ್ ನ ಕಣ್ಗಾವಲು ಪಡೆಯ ಅಧಿಕಾರಿಗಳು ಚುರುಕಾಗಿದ್ದು, ಪೋಲಿಸರಿಗೆ ಸುದ್ದಿ ನೀಡಿದ್ದಾರೆ. ಕೂಡಲೇ ಪೋಲಿಸರು ಸ್ಥಳಕ್ಕೆ ಆಗಮಿಸಿ ಆಗಂತುಕನನ್ನು ಬಂಧಿಸಿದ್ದಾರೆ. ಕಳ್ಳತನಕ್ಕೆ ಯತ್ನಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಎಟಿಎಮ್ ಒಡೆಯಲು ಯತ್ನಿಸುವ ವೇಳೆಯೇ ಆತನನ್ನು ಬಂಧಿಸಿದ್ದರಿಂದ ಯಾವುದೇ ಹಣ ಕಳವಾಗಿಲ್ಲ, ವಿಚಾರಣೆ ನಡೆಯುತ್ತಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

Related posts

ದರ್ಶನ್ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕೋರ್ಟ್‌ನಿಂದ ತಡೆಯಾಜ್ಞೆ ತಂದ ವಿಜಯಲಕ್ಷ್ಮೀ..! ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ ದರ್ಶನ್ ಪತ್ನಿ..!

ಆ ರಾಜಕಾರಣಿ ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ್ದಾನೆ ಏಂದು ಆರೋಪಿಸಿದ್ದು ಯಾರಿಗೆ? ‘ನಾಗಮಂಡಲ’ ಖ್ಯಾತಿಯ ನಟಿ ಬಿಚ್ಚಿಟ್ಟ ರಹಸ್ಯವೇನು?

ಸಿನಿಮೀಯ ರೀತಿಯಲ್ಲಿ ಮನೆಗೆ ನುಗ್ಗಿದ ಕೀಚಕರು! ಪೋಷಕರಿಗೆ ಥಳಿಸಿ ಬಾಲಕಿ ಮೇಲೆ ಅತ್ಯಾಚಾರ..! ಏನಿದು ಪ್ರತೀಕಾರದ ಸ್ಟೋರಿ?